ಎಂಎಲ್‌ಸಿ ಮನೆ ಮುಂದೆ ಬ್ಯಾಗ್‌ ಬಿಟ್ಟು ಹೋದ ಆಗಂತುಕ: ನೋಡಿದ್ರೆ ಕಾದಿತ್ತು ಶಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂಬೈನಲ್ಲಿರುವ ಎಂಎಲ್‌ಸಿ ಪ್ರಸಾದ್‌ ಲಾಡ್‌ ಮನೆ ಮುಂದೆ ಅಪರಿಚಿತ ವ್ಯಕ್ತಿ ಬ್ಯಾಗ್ ಇಟ್ಟು ಹೋಗಿರುವ ವಿಚಿತ್ರ ಘಟನೆ ನಡೆದಿದೆ. ಅದರಲ್ಲೇನಿ ವಿಶೇಷ ಅಂತೀರಾ..ಆ ಬ್ಯಾಗ್‌ ತೆರೆದು ನೋಡಿದ್ರೆ ಅದರ ತುಂಬಾ ಹಣ ಮತ್ತು ಅನೇಕ ವಸ್ತುಗಳು ಸಿಕ್ಕಿವೆ.  ಬಿಜೆಪಿ ಎಂಎಲ್‌ಸಿ ಪ್ರಸಾದ್ ಲಾಡ್ ಮನೆ ಬಳಿ ಬಂದಿದ್ದ ವ್ಯಕ್ತಿಯೊಬ್ಬರು ಇಂದು ಬೆಳಗ್ಗೆ 6 ಗಂಟೆಗೆ ಬ್ಯಾಗ್ ಹಿಡಿದು ಅತ್ತಿಂದಿತ್ತ, ಇತ್ತಂದತ್ತ ತಿರುಗಾಡುತ್ತಿದ್ದ ದೃಶ್ಯ ಕಂಡು ಬಂದಿದೆ. ಇದನ್ನು ಅರಿತು ಪೊಲೀಸರು ಆತನ ಬಳಿಗೆ ಹೋಗುವಷ್ಟರಲ್ಲಿ ಬ್ಯಾಗ್ ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ.

ಪೊಲೀಸರು ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ ಹಣ, ನಾಣ್ಯ, ಗಣೇಶನ ಮೂರ್ತಿ, ಆಭರಣ, ಬೆಳ್ಳಿ ಸಾಮಾನು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ. ಬ್ಯಾಗ್ ಬಿಟ್ಟು ಹೋದವರ ಗುರುತು ಪತ್ತೆಯಾಗಿಲ್ಲ. ಈ ಘಟನೆ ಬಗ್ಗೆ ಎಂಎಲ್‌ಸಿ ಪ್ರಸಾದ್ ಕಳವಳ ವ್ಯಕ್ತಪಡಿಸಿದ್ದು, ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!