ಹೊಸದಿಗಂತ ವರದಿ, ಹುಬ್ಬಳ್ಳಿ:
ವೈಯಕ್ತಿಕ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸೋಮವಾರ ತಡರಾತ್ರಿ ರಾಯನಾಳ ಗ್ರಾಮದಲ್ಲಿ ನಡೆದಿದೆ.
ಗಂಗಿವಾಳ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ದೀಪಕ ಪಟದಾರಿ (30) ಹತ್ಯೆಗೊಳಗಾದ ವ್ಯಕ್ತಿ.
ಪ್ರವಿಣ ಎಂ., ಎಲ್ಲಪ್ಪಾ ಮೇಟಿ, ರುದ್ರಪ್ಪ ಮೇಟಿ,ಮಲ್ಲಿಕಾರ್ಜುನ ಮೇಟಿ, ಶಿವು ಮೇಟಿ, ನಾಗರಾಜ ಹೆಗ್ಗಣ್ಣವರ ಎಂಬುವರು ತಲವಾರ ಮತ್ತು ಚೂರಿಗಳಂತ ಮಾರಕಾಸ್ತ್ರಗಳಿಂದ ಇರಿದು ಪರಾರಿ ಯಾಗಿದ್ದರು. ನಂತರ ಸ್ಥಳೀಯರು ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು. ಅತೀವ ರಕ್ತ ಸ್ರಾವದಿಂದ ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ರಾಯನಾಳ ಗ್ರಾಮದ ಮೇಟಿ ಎಂಬುವರ ಮನೆಯ ಯುವತಿಯನ್ನು ಕೊಲೆಯಾದ ದೀಪಕ ಪ್ರೀತಿಸಿ ಮದುವೆಯಾಗಿದ್ದ.
ದೀಪಕ ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯನಾಗಿದ್ದು, ಇತ್ತೀಚೆಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅವಿಶ್ವಾಸ ಮಾಡಿಸಿದ್ದರ ಕಾರಣ ಹತ್ಯೆ ಮಾಡಲಾಗಿದೆ ಎಂದು ಇತನ ಸಹೋದರ ಸಂಜಯ ಪಟದಾರಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹತ್ಯೆ ಮಾಡಿದ ಆರೋಪಿಗಳಿಗೆ ಪೊಲೀಸರು ಬಲೆ ಬಿಸಿದ್ದಾರೆ.