ಸೆನೆಕ್ಸ್‌, ನಿಫ್ಟಿ ಏರಿಕೆ : ಹೇಗಿದೆ ಷೇರು ಪೇಟೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಂಗಳವಾರ ಬೆಳಗ್ಗೆ ಭಾರತೀಯ ಷೇರು ಮಾರುಕಟ್ಟೆಗಳು ಸಕಾರಾತ್ಮಕವಾಗಿ ತೆರೆದಿವೆ.ಬಿಎಸ್‌ಇ ಸೆನ್ಸೆಕ್ಸ್ 300 ಪಾಯಿಂಟ್‌ಗಳ ಏರಿಕೆಯೊಂದಿಗೆ 53,521 ಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 80 ಪಾಯಿಂಟ್‌ಗಳ ಏರಿಕೆ ಕಂಡು 15,920 ಕ್ಕೆ ತಲುಪಿದೆ.

ಸೆನ್ಸೆಕ್ಸ್-30 ಷೇರುಗಳಲ್ಲಿ, ಬಜಾಜ್ ಫಿನ್‌ಸರ್ವ್, ರಿಲಯನ್ಸ್, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಟೆಕ್ ಎಂ, ಪವರ್‌ಗ್ರಿಡ್, ಎಂ & ಎಂ ಮತ್ತು ಎಚ್‌ಡಿಎಫ್‌ಸಿ ಟಾಪ್ ಗೇನರ್‌ಗಳಾಗಿವೆ. ಏಷ್ಯನ್ ಪೇಂಟ್ಸ್ ಮತ್ತು ಐಟಿಸಿ ಮಾತ್ರ ನಷ್ಟ ಅನುಭವಿಸಿವೆ.

ವಿಶಾಲವಾದ ಮಾರುಕಟ್ಟೆಗಳಲ್ಲಿ, ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಸಕಾರಾತ್ಮಕ ಪ್ರದೇಶದಲ್ಲಿದ್ದು, ಶೇಕಡಾ 0.7 ವರೆಗೆ ಏರಿಕೆ ಕಂಡಿದೆ.

ಇಂದು ಈ ಶೇರುಗಳನ್ನು ಗಮನಿಸಿ :
ಕಿರ್ಲೋಸ್ಕರ್‌ ಇಂಡಸ್ಟ್ರೀಸ್‌, ವೇದಾಂತ, ಎಚ್‌ಡಿಎಫ್‌ಸಿ ಬ್ಯಾಂಕ್‌, ಎನ್‌ಎಮ್‌ಡಿಸಿ, ಟಾಟಾ ಸ್ಟೀಲ್‌, ಕೋಟಕ್‌ ಮಹೀಂದ್ರಾ, ಇಂಡಸ್‌ಲ್ಯಾಂಡ್‌ ಬ್ಯಾಂಕ್

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!