ಹೊಸದಿಗಂತ ಕಲಬುರಗಿ:
ಬಳ್ಳಾರಿ ಮೂಲದ ಗೃಹಿಣಿಯೋರ್ವಳು ಗೆಸ್ಟ್ ಹೌಸ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.
ಕಲಬುರಗಿ ನಗರದ ದರ್ಗಾ ಏರಿಯಾದಲ್ಲಿನ ಇಂಡಿಯನ್ ಗೆಸ್ಟ್ ಹೌಸ್,ನಲ್ಲಿ ಬಳ್ಳಾರಿ ಮೂಲದ ಸಾಧಿಕಾ ಮನಿಯಾರ್ (25) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದು, ಸಾಧಿಕಾ ಮನಿಯಾರ್ ಪತಿ ಅಬ್ದುಲ್ ರಹೀಮ್ ಜೊತೆಗೆ ಖಾಜಾ ಬಂದೇ ನವಾಜ್ ದರ್ಗಾದ ಭೇಟಿ ನೀಡಲು ಕಲಬುರಗಿಗೆ ಆಗಮಿಸಿದ್ದರು.
ನಿನ್ನೆ ಸಂಜೆ ಪತ್ನಿಯನ್ನು ಲಾಡ್ಜ್ ನಲ್ಲಿ ಬಿಟ್ಟು ಪತಿ ಅಬ್ದುಲ್ ರಹೀಂ ಅಧೋನಿಗೆ ತೆರಳಿದ್ದ, ಬೆಳಗಾಗುವಷ್ಟರಲ್ಲಿ ಪತ್ನಿ ಸಾಧಿಕಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಕುರಿತು ರೋಜಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.