ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಯರ್ ಬೆಲೆ ಏರಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿರುವುದರಿಂದ ಮದ್ಯ ಪ್ರಿಯರಿಗೆ ದೊಡ್ಡ ಆಘಾತವಾಗಿದೆ. ಹೌದು. ಅ.1ರಿಂದ ರಾಜ್ಯದಲ್ಲಿ ಬಿಯರ್ ಬೆಲೆ ಏರಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಸದ್ಯದಲ್ಲೇ ಈ ಕುರಿತು ಆದೇಶ ಹೊರಬೀಳುವ ಸಾಧ್ಯತೆ ಇದೆ.
ಬಿಯರ್ ಬೆಲೆಯನ್ನು ಹೆಚ್ಚಿಸುವ ಮಸೂದೆಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಪ್ರತಿ ಬಾಟಲಿ ಬಿಯರ್ ಬೆಲೆಯನ್ನು 10 ರಿಂದ 12 ರೂಪಾಯಿಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಪ್ರತಿ ಬಿಯರ್ ಸ್ಪ್ಯಾಬ್ ಗಳ ಬೆಲೆ ಏರಿಕೆ ಮಾಡಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಆಗಸ್ಟ್ 23 ರಂದು ಸರ್ಕಾರವು ಕರಡು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿ 15 ದಿನಗಳ ಕಾಲಮಿತಿಯನ್ನು ನಿರ್ದಿಷ್ಟಪಡಿಸಿತು. ಹಾಗಾಗಿ ಸದ್ಯದಲ್ಲೇ ಬಿಯರ್ ಬೆಲೆ ಪ್ರತಿ ಬಾಟಲಿಗೆ 10-12 ರೂಪಾಯಿ ಹೆಚ್ಚಾಗಲಿದೆ. ಈ ಕಾರಣಕ್ಕಾಗಿ, ಕಳೆದ ಒಂದೂವರೆ ವರ್ಷದಿಂದ ಬಿಯರ್ ಬೆಲೆ ಮೂರು ಪಟ್ಟು ಹೆಚ್ಚಾಗಿದೆ.