ಸಕ್ಕರೆ ಎಲ್ಲಕ್ಕೂ ಬೇಕೇಬೇಕು.. ನಮ್ಮ ಹಿಂದಿನ ಕಾಲದವರು ಏನು ಸಕ್ಕರೆ ತಿಂತಾ ಇರ್ಲಿಲ್ವಾ? ಅಥವಾ ನಾವು ಮಕ್ಕಳಿದ್ದಾಗ ನಮಗೆ ಸಕ್ಕರೆ ಕೊಡ್ತಾ ಇರ್ಲಿಲ್ವಾ? ಈಗೇಕೆ ಸಕ್ಕರೆ ತಿನ್ನಬಾರದು ಅನ್ನೋ ಹೊಸ ವರಸೆ ಅನ್ನೋ ಪ್ರಶ್ನೆ ನಿಮಗೂ ಬಂತಾ?
ನಿಮ್ಮ ತಾಯಿ ಅಥವಾ ತಂದೆ ಎಷ್ಟು ಸಕ್ಕರೆ ತಿಂತಿದ್ರು? ಕಾಫಿ ಟೀ ಎಷ್ಟು ಬಾರಿ ಮಾಡ್ತೀರೋ ಅಷ್ಟು ಬಾರಿ. ಇನ್ನು ಸಕ್ಕರೆಗಿಂತ ಬೆಲ್ಲ ಬಳಕೆ ಮಾಡಿ ಸಿಹಿತಿನಿಸು ಮಾಡೋರು. ಆದರೆ ನಾವು ನೀವು? ಕೆಲಾಕ್ಸ್‌ನಲ್ಲಿ ಸಕ್ಕರೆ, ಜ್ಯೂಸ್‌ಗೆ ಸಕ್ಕರೆ,ಕಾಫಿ ಟೀಗೆ ಸಕ್ಕರೆ, ಬಿಸ್ಕೆಟ್‌ನಲ್ಲಿ ಸಕ್ಕರೆ..
ಒಂದು ತಿಂಗಳು ಸಕ್ಕರೆ ಬಿಟ್ಟು ನೋಡಿ.. ಯಾಕೆ ಗೊತ್ತಾ?
ನಿಮ್ಮ ಇಮ್ಯುನಿಟಿ ಮುಂಚಿಗಿಂತ ಹೆಚ್ಚಾಗುತ್ತದೆ. ಆಗಾಗ ಬರುವ ಶೀತ ಕೆಮ್ಮು ಹೋಗುತ್ತದೆ.
ಬೇಗ ತೂಕ ಇಳಿಕೆಯಾಗುತ್ತದೆ.
ನಿಮ್ಮ ಸ್ಕಿನ್ ಹೊಳಪು ಕಾಣುತ್ತದೆ. ಸಕ್ಕರೆ ಬಿಟ್ಟರೆ ಮೊಡವೆಗಳು ನಿಮ್ಮನ್ನು ಬಿಡುತ್ತವೆ.
ಮಾನಸಿಕ ಆರೋಗ್ಯ ಸ್ಥಿರವಾಗಿರುತ್ತದೆ. ಆಂಕ್ಸೈಟಿ, ಡಿಪ್ರೆಷನ್ ಬರೋದಿಲ್ಲ.
ಹಾರ್ಮೋನ್‌ಗಳು ತಮ್ಮ ಕೆಲಸವನ್ನು ತಮ್ಮ ಪಾಡಿಗೆ ಮಾಡಿಕೊಂಡು ಹಾಯಾಗಿ ಇರುತ್ತದೆ.
ಹಲ್ಲಿನ ಆರೋಗ್ಯ ಚೆನ್ನಾಗಿರುತ್ತದೆ.