CINE | ಸಣ್ಣ ವಯಸ್ಸಿನಲ್ಲೇ ದೊಡ್ಡ ಸಕ್ಸಸ್‌, ಹೇಗಿತ್ತು ರಶ್ಮಿಕಾ ಸಿನಿ ಜರ್ನಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ನಟಿ ರಶ್ಮಿಕಾ ಮಂದಣ್ಣ ಜನ್ಮದಿನವನ್ನು ಆಚರಿಸಿಕೊಳ್ತಿದ್ದಾರೆ. ಈ ಬಾರಿ ರಶ್ಮಿಕಾ ಅಭುದಾಬಿಯಲ್ಲಿ ತಮ್ಮ ಜನ್ಮದಿನವನ್ನು ವಿಜಯ್‌ ದೇವರಕೊಂಡ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

I will do it specially for you; Vijay Deverakonda's reply for Rashmika  Mandanna turn heads | klapboardpostಕನ್ನಡದಲ್ಲಿ ಒಂದೇ ಸಿನಿಮಾ ಮಾಡಿ ನಂತರ ಎಲ್ಲ ಸಿನಿ ರಂಗಗಳಲ್ಲಿ ಸುತ್ತಿ ಸದ್ಯಕ್ಕೆ ತೆಲುಗು ಹಾಗೂ ಬಾಲಿವುಡ್‌ನಲ್ಲಿ ರಶ್ಮಿಕಾ ಸೆಟಲ್‌ ಆಗಿದ್ದಾರೆ.

Kateyonda Helide - Saanvi Cover | Saleem Javed | Kirik Party | Rakshit  Shetty | Rashmika Mandannaಕಿರಿಕ್‌ ಹುಡುಗಿ ಸಕ್ಸಸ್‌ ಆಗಿದ್ದು ಹೇಗೆ?

ಕನ್ನಡದಲ್ಲಿ ರಕ್ಷಿತ್‌ ಶೆಟ್ಟಿ ಸಿನಿಮಾ ಕಿರಿಕ್‌ ಪಾರ್ಟಿಯಿಂದ ರಶ್ಮಿಕಾ ಮಂದಣ್ಣ ಫಿಲ್ಮ್‌ ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದರು. ಒಂದೇ ಸಿನಿಮಾದಿಂದ ರಶ್ಮಿಕಾ ನ್ಯಾಷನಲ್‌ ಕ್ರಶ್‌ ಆಗಿದ್ದರು. ಎಲ್ಲರೂ ಫೇವರೆಟ್‌ ಹೀರೋಯಿನ್‌ ಲಿಸ್ಟ್‌ನಲ್ಲಿ ರಶ್ಮಿಕಾರನ್ನು ಆಡ್‌ ಮಾಡಿಕೊಂಡಿದ್ದರು.

Happy birthday Rashmika Mandanna: From Kirik Party's Saanvi to Pushpa's  Srivalli, revisit the star's popular rolesರಕ್ಷಿತ್‌ ಶೆಟ್ಟಿ ಜೊತೆಗಿನ ಎಂಗೇಜ್ಮೆಂಟ್‌ ಬ್ರೇಕ್‌ ಆದ ನಂತರ ರಶ್ಮಿಕಾಗೆ ಹೇಟರ್ಸ್‌ ಕಾಟ ಶುರುವಾಗಿತ್ತು. ಅದೇ ಸಮಯದಲ್ಲಿ ತೆಲುಗು ಇಂಡಸ್ಟ್ರಿಗೂ ರಶ್ಮಿಕಾ ಕಾಲಿಟ್ಟಿದ್ದರು. ಕನ್ನಡ ಬಿಟ್ಟು ಹೋದ ರಶ್ಮಿಕಾ ಎಂದು ಆಡಿಕೊಂಡಿದ್ದರು. ಅಂಜನಿಪುತ್ರ ಸಿನಿಮಾ ನಂತರ ರಶ್ಮಿಕಾ ತೆಲುಗಿನ ಚಲೋ ಸಿನಿಮಾದಲ್ಲಿ ಕಾಣಿಸಿಕೊಂಡರು. ಇದರಿಂದ ತೆಲುಗು ಆಡಿಯನ್ಸ್‌ ರಶ್ಮಿಕಾರನ್ನ ಇಷ್ಟಪಟ್ಟಿದ್ದರು.

Rashmika Mandanna's ex-fiance Rakshit Shetty reveals that he is still in  touch with the actress: 'She had a big dream...'ನಂತರ ಗೀತ ಗೋವಿಂದಂ ಸೂಪರ್‌ ಹಿಟ್‌ ಆಯ್ತು, ದೇವದಾಸ್‌, ಸರಿಲೇರು ನೀಕೆವರು, ಪುಷ್ಪ ಸಿನಿಮಾಗಳು ರಶ್ಮಿಕಾರನ್ನು ಹುಡುಕಿ ಬಂದವು. ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ ನಂತರ ರಶ್ಮಿಕಾ ಬಿಗ್‌ ಬಿ ಅಮಿತಾಭ್‌ ಮಗಳಾಗಿ ಗುಡ್‌ಬೈನಲ್ಲಿ ನಟಿಸಿದ್ರು. ನಂತರ ಸಿದ್ಧಾರ್ಥ್‌ ಜೊತೆ ಮಿಷನ್‌ ಮಜ್ನು, ರಣ್‌ಬೀರ್‌ ಜೊತೆಗಿನ ಅನಿಮಲ್‌ ಕೂಡ ಸಖತ್‌ ಹಿಟ್‌ ಆಗಿದೆ.

Animal: Hua Main (Song) | Ranbir Kapoor | Rashmika Mandannaಇನ್ನೂ ರಶ್ಮಿಕಾ ಕೈಯಲ್ಲಿ ಪುಷ್ಪ-2, ರೈನ್ಬೋ, ದಿ ಗರ್ಲ್‌ಫ್ರೆಂಡ್‌, ಚಾವಾ ಸಿನಿಮಾಗಳು ಬಾಕಿ ಇದೆ.

Pushpa 2: The Rule New Poster - Rashmika Mandanna Is Back As Srivalli And  Howಸಣ್ಣ ವಯಸ್ಸಿನಲ್ಲೇ ಕನ್ನಡದ ರಶ್ಮಿಕಾ ಎಲ್ಲೆಡೆ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ. Happy birthday Rashmika

Rashmika Mandanna HD Wallpapers | Latest Rashmika Mandanna Wallpapers HD  Free Download (1080p to 2K) - FilmiBeat

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!