ಪಂದ್ಯ ನಡೆಯುತ್ತಿದ್ದಾಗಲೇ ಮೈದಾನದಲ್ಲಿ ಬಾಂಬ್​​ ಸ್ಫೋಟ: ನಾಲ್ವರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಅಫ್ಘಾನಿಸ್ತಾನದ ಕಾಬೂಲ್​​​ನ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಿ-20 ಪಂದ್ಯ ನಡೆಯುತ್ತಿದ್ದ ವೇಳೆ ಬಾಂಬ್​ ಸ್ಫೋಟಗೊಂಡಿದೆ. ಪರಿಣಾಮ ಗ್ಯಾಲರಿಯಲ್ಲಿ ಕುಳಿತುಕೊಂಡಿದ್ದ ನಾಲ್ವರು ಗಾಯಗೊಂಡಿದ್ದಾಗಿ ವರದಿಯಾಗಿದೆ.

ಕಾಬೂಲ್​ನ ಕ್ರಿಕೆಟ್ ಮೈದಾನದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಗೊಂಡ ವೇಳೆ ಟಿ-20 ಪಂದ್ಯ ನಡೆಯುತ್ತಿತ್ತು. ಕ್ರೀಡಾಂಗಣ ಸಂಪೂರ್ಣವಾಗಿ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು.

ಪಾಮಿರ್​ ಝಲ್ಮಿ ಮತ್ತು ಬ್ಯಾಂಡ್​ ಎ ಅಮೀರ್​​ ಡ್ರಾಗನ್ಸ್​ ತಂಡಗಳ ನಡುವೆ ಶಪೇಜಾ ಕ್ರಿಕೆಟ್ ಲೀಗ್‌ನ 22 ನೇ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಎರಡು ತಂಡದ ಪ್ಲೇಯರ್ಸ್​​​ಗಳನ್ನ ಬಂಕರ್​​ನೊಳಗೆ ಸುರಕ್ಷಿತವಾಗಿ ಕರೆದೊಯ್ಯಲಾಗಿದೆ.

ಬಾಂಬ್​​ ಸ್ಫೋಟಗೊಂಡಿರುವ ಬಗ್ಗೆ ಎಸಿಬಿಯ ಮುಖ್ಯ ಕಾರ್ಯನಿರ್ವಾಹಕ ನಸೀಬ್ ಖಾನ್ ಪ್ರಕಟಣೆಯಲ್ಲಿ ಖಚಿತ ಪಡಿಸಿದ್ದು, ಸಿಬ್ಬಂದಿ ಹಾಗೂ ಆಟಗಾರರು ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!