ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಟಿಸಿಎಸ್ ಕಂಪನಿಯ ಉದ್ಯೋಗಿಗಳು ಏಕಾಏಕಿ ಕೆಲಸ ಬಿಟ್ಟು ಆಫೀಸ್‌ನಿಂದ ಓಡಿ ಹೊರಬಂದಿದ್ದಾರೆ.
ಹೌದು, ಇದಕ್ಕೆ ಕಾರಣ ಬಾಂಬ್ ಬೆದರಿಕೆ ಕರೆ, ಇದನ್ನು ಮಾಡಿದ್ಯಾರು? ಇದು ನಿಜವಾ? ಮಾಹಿತಿ ಇಲ್ಲಿದೆ..
ಟಿಸಿಎಸ್ ಕಂಪನಿಗೆ ಬಂದ ಕರೆ ಹುಸಿಯಾದ್ದು, ಇದನ್ನು ಮಾಡಿದ್ದು, ಇದೇ ಕಂಪನಿಯ ಎಕ್ಸ್ ಉದ್ಯೋಗಿ!! ಕೆಲಸದಿಂದ ತೆಗೆದು ಹಾಕಿದ ಸಿಟ್ಟಿಗೆ ಯುವತಿ ಕರೆ ಮಾಡಿ ಬಾಂಬ್ ಇದೆ ಎಂದು ಹೆದರಿಸಿದ್ದಾಳೆ.
ಈಕೆಯ ಕರೆಯಿಂದಾಗಿ ಪರಪ್ಪನ ಅಗ್ರಹಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ, ಜೊತೆಗೆ ಬಾಂಬ್ ನಿಷ್ಟ್ರಿಯದಳದ ಸಿಬ್ಬಂದಿ ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ.
ಬೆಳಗಾವಿ ಮೂಲದ ಯುವತಿಯನ್ನು ಟಿಸಿಎಸ್ ಕೆಲಸದಿಂದ ತೆಗೆದಿತ್ತು, ಆಕೆ ಕಂಪನಿಯ ಚಾಲಕನಿಗೆ ಕರೆ ಮಾಡಿ ಬಾಂಬ್ ಇಟ್ಟಿದ್ದೇನೆ ಎಂದು ಹೇಳಿದ್ದಾಳೆ, ಈ ವೇಳೆ ಆಕೆ ಮದ್ಯಪಾನ ಮಾಡಿದ್ದಾರೆ ಎಂದು ಹೇಳಲಾಗಿದೆ.