Thursday, December 8, 2022

Latest Posts

ಇರಾನ್ ವಿಮಾನಕ್ಕೆ ಬಂತು ಬಾಂಬ್ ಬೆದರಿಕೆ: ಕೊನೆಗೂ ಚೀನಾದಲ್ಲಿ ಸುರಕ್ಷಿತವಾಗಿ ಲ್ಯಾಂಡ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇರಾನ್‌ನಿಂದ ಚೀನಾಗೆ ಹೊರಟಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಭಾರತೀಯ ವಾಯು ಪ್ರದೇಶಕ್ಕೆ ಬಂದಿದ್ದು ,ಅದಾದ ಬಳಿಕ ತೆರಳಿದ್ದ ವಿಮಾನ ಇದೀಗ ಮಹಾನ್‌ ಏರ್ ಫ್ಲೈಟ್ 81 ಚೀನಾದ ಗುವಾಂಗ್‌ಝೌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ.

ಇರಾನ್‌ನ ಟೆಹ್ರಾನ್‌ನಿಂದ ಹೊರಟಿದ್ದ ವಿಮಾನವು ಚೀನಾದ ಕಡೆಗೆ ಸಂಚರಿಸುತ್ತಿದ್ದ ವೇಳೆ ಭಾರತೀಯ ವಾಯುಪ್ರದೇಶದ ಅಧಿಕಾರಿಗಳಿಗೆ ಬಾಂಬ್ ಬೆದರಿಕೆಯ ಎಚ್ಚರಿಕೆ ಕರೆ ಬಂದಿತ್ತು.

ಆರಂಭದಲ್ಲಿ ಏರ್‌ ಟ್ರಾಫಿಕ್‌ ಕಂಟ್ರೋಲ್‌ ಆ ವಿಮಾನದ ಪೈಲಟ್‌ಗಳಿಗೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ತಿರಸ್ಕರಿಸಿ, ಜೈಪುರ ಅಥವಾ ಚಂಡೀಗಢ ವಿಮಾನ ನಿಲ್ದಾಣಗಳಲ್ಲಿ ಇಳಿಯಲು ವಿನಂತಿಸಿತು. ಆದರೆ, ಪೈಲಟ್‌ಗಳು ಆ ಎರಡೂ ವಿಮಾನ ನಿಲ್ದಾಣಗಳಲ್ಲಿ ಇಳಿಯಲು ನಿರಾಕರಿಸಿ ತಮ್ಮ ಪ್ರಯಾಣವನ್ನು ಮುಂದುವರೆಸಿದರು ಮತ್ತು ಚೀನಾದಲ್ಲಿ ವಿಮಾನವನ್ನು ಲ್ಯಾಂಡ್‌ ಮಾಡಿದ್ದಾರೆ.

ಆದರೂ, ವಿಮಾನಯಾನವು ಭಾರತೀಯ ವಾಯುಪ್ರದೇಶದ ಮೂಲಕ ಸಾಗುತ್ತಿರುವಾಗ ಬಾಂಬ್ ಭೀತಿಯ ಸೂಚನೆಯನ್ನು ಸ್ವೀಕರಿಸಿ , IAF ಫೈಟರ್ ಏರ್‌ಕ್ರಾಫ್ಟ್‌ಗಳು ವಿಮಾನವನ್ನು ಸುರಕ್ಷಿತ ದೂರದಲ್ಲಿ ಹಿಂಬಾಲಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!