Friday, December 9, 2022

Latest Posts

ಬಸ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದ ಮಹಿಳಾ ಕಂಡಕ್ಟರ್ ಆದ್ರು ಸಸ್ಪೆಂಡ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಹಿಳಾ ಸಿಬ್ಬಂದಿ ಚಾಲಕನ ಸೀಟಿನಲ್ಲಿ ಕುಳಿತು ಅಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ಸಸ್ಪೆಂಡ್ ಆಗಿದ್ದಾರೆ .
ಸಾಗರ್ ಮಂಗಳ ಗೋವರ್ಧನ್ ಅಮಾನತುಗೊಂಡ ಕಂಡಕ್ಟರ್ ಆಗಿದ್ದು, ಇವರು MSRTC ಯ ಒಸ್ಮಾನಾಬಾದ್ ಜಿಲ್ಲೆ ಕಾಳಂಬ್ ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿಂದೆಯೂ ದುರ್ವರ್ತನೆ ತೋರಿದ ಕಾರಣಕ್ಕೆ ಇವರ ವಿರುದ್ಧ ದೂರು ದಾಖಲಾಗಿತ್ತು ಎನ್ನಲಾಗಿದೆ.
ಇನ್ನು ತಮ್ಮನ್ನು ಅಮಾನತು ಮಾಡಿರುವ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಕಂಡಕ್ಟರ್ ಸಾಗರ್ ಮಂಗಳ ಗೋವರ್ಧನ್, ಈ ಹಿಂದೆ ಸಾರಿಗೆ ನೌಕರರು ಮುಷ್ಕರ ಕೈಗೊಂಡ ವೇಳೆ ನಾನು ಅದರಲ್ಲಿ ಭಾಗವಹಿಸದೆ ಕಾರ್ಯನಿರ್ವಹಿಸಿದ್ದೆ. ಹೀಗಾಗಿ ದುರುದ್ದೇಶದಿಂದ ಅಮಾನತು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!