Sunday, March 26, 2023

Latest Posts

ಪ್ರೀತಿಯ ಮೀನು ಮೃತಪಟ್ಟಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಾನು ಸಾಕಿದ್ದ ಪ್ರೀತಿಯ ಮೀನು ಮೃತಪಟ್ಟಿದ್ದಕ್ಕೆ ಮನನೊಂದು ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

ತಿರುವನಂತಪುರಂನ 13 ವರ್ಷದ ಬಾಲಕ ರೋಷನ್‌ಗೆ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಇಷ್ಟ ಪಟ್ಟು ಮನೆಗೆ ಅಕ್ವೇರಿಯಂ ಒಂದನ್ನು ತರಿಸಿಕೊಂಡಿದ್ದ. ಪ್ರೀತಿಯಿಂದ ಮನೆಯಲ್ಲಿ ಸಾಕಿದ್ದ ಮೀನು ಮೃತಪಟ್ಟಿದ್ದಕ್ಕೆ ಮನನೊಂದು ಆತ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೀನು ಸತ್ತಿದ್ದಕ್ಕೆ ಡಿಪ್ರೆಶನ್‌ನಲ್ಲಿದ್ದ ಬಾಲಕ ರೋಷನ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಎದುರು ಇರುವ ಪಾರಿವಾಳಗಳಿಗೆ ಕಾಳು ಹಾಕಿ ಬರುತ್ತೇನೆ ಎಂದು ಹೋಗಿದ್ದ ರೋಷನ್ ಗಂಟೆಯಾದರೂ ಕಾಣಿಸಿಲ್ಲ, ಮನೆಯವರು ಗಾಬರಿಯಿಂದ ನೋಡಿದಾಗ ರೋಷನ್ ಆತ್ಮಹತ್ಯೆಗೆ ಶರಣಾಗಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರೊಳಗೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!