Saturday, March 25, 2023

Latest Posts

ಕಾಂಗ್ರೆಸ್ ಸರ್ವಸದಸ್ಯರ ಅಧಿವೇಶನ: ಪ್ರಿಯಾಂಕಾ ಸ್ವಾಗತಕ್ಕೆ ರಸ್ತೆ ತುಂಬೆಲ್ಲಾ ಹೂವಿನ ರಾಶಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

85ನೇ ಸರ್ವಸದಸ್ಯ ಅಧಿವೇಶನಕ್ಕೆ ಶನಿವಾರ ರಾಯ್‌ಪುರದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಇತರ ನಾಯಕರನ್ನು ಸ್ವಾಗತಿಸಲು ಕಾಂಗ್ರೆಸ್ ಕಾರ್ಯಕರ್ತರು ಬೀದಿಯಲ್ಲಿ ಹೂವಿನ ರಾಶಿಯನ್ನೇ ಸುರಿದಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಪಕ್ಷದ 85ನೇ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಶನಿವಾರ ರಾಯ್‌ಪುರಕ್ಕೆ ಆಗಮಿಸಿದ್ದಾರೆ. ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಪ್ರಿಯಾಂಕಾ ಗಾಂಧಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಇನ್ನೂ ರಾಯ್‌ಪುರಕ್ಕೆ ಭೇಟಿ ನೀಡುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸ್ವಾಗತಕ್ಕೆ ರಸ್ತೆ ತುಂಬೆಲ್ಲಾ ಗುಲಾಬಿ ದಳಗಳ ರಾಶಿಯೇ ತುಂಬಿತ್ತು.

ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜಕೀಯ ಮತ್ತು ಆರ್ಥಿಕ ಸೇರಿದಂತೆ ನಿರ್ಣಯಗಳ ಬಗ್ಗೆಯೂ ಶನಿವಾರದ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!