VIRAL VIDEO | ಸ್ಕೂಟಿಯಲ್ಲಿ ಹೋಗುತ್ತಿದ್ದವರ ತಲೆ ಮೇಲೆ ಬಿತ್ತು ಮರದ ರೆಂಬೆ, ಹೆಲ್ಮೆಟ್ ಕೂಡ ಧರಿಸಿರಲಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೆಲ್ಮೆಟ್ ಹಾಕಿ ಅಂದ್ರೆ ಈ ರೋಡ್‌ನಲ್ಲಿ ಪೊಲೀಸ್ ಇರೋದಿಲ್ಲ ಹಾಗಾಗಿ ಹೆಲ್ಮೆಟ್ ಹಾಕೋದಿಲ್ಲ ಎನ್ನುವ ಸಾಕಷ್ಟು ಜನರಿದ್ದಾರೆ.

ಹೆಲ್ಮೆಟ್ ಹಾಕುವುದು ಪೊಲೀಸರಿಗಾಗಿ ಅಲ್ಲ, ನಿಮ್ಮ ಸುರಕ್ಷತೆಗಾಗಿ. ರಾಜಸ್ಥಾನದ ಜೋಧ್‌ಪುರದಲ್ಲಿ ಅಪಘಾತದ ವಿಡಿಯೋವೊಂದು ವೈರಲ್ ಆಗಿದೆ. ಸ್ಕೂಟಿಯಲ್ಲಿ ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡಿಂಗ್ ಮಾಡುತ್ತಿದ್ದವರ ಮೇಲೆ ಏಕಾಏಕಿ ದೊಡ್ಡ ಮರದ ರೆಂಬೆಯೊಂದು ಬಿದ್ದಿದೆ.

ತಕ್ಷಣವೇ ಎಲ್ಲರೂ ಗಾಡಿಯಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಸುತ್ತಮುತ್ತ ಇದ್ದ ಜನರು ಓಡಿಬಂದು, ಗಾಡಿ ಹಾಗೂ ರೆಂಬೆಯನ್ನು ಎತ್ತಿದ್ದಾರೆ. ಮೂವರೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಳಿ ಮಳೆಗೆ ಈ ರೀತಿ ಕೊಂಬೆಗಳು ಬೀಳುವ ಸಾಧ್ಯತೆ ಹೆಚ್ಚಿದ್ದು, ಸೇಫ್ ಆಗಿ ಗಾಡಿ ಓಡಿಸಬೇಕಿದೆ.

https://twitter.com/bulletindaily/status/1663538426665369602?s=20

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!