April 3, 2026
Friday, April 3, 2026
spot_img

ಇನ್ಮುಂದೆ ಬಾಯಿಪಾಠಕ್ಕೆ ಬಿತ್ತು ಬ್ರೇಕ್: ಸಿಬಿಎಸ್ಇ ಮಕ್ಕಳಿಗೆ ಹೊಸ ಪಠ್ಯಕ್ರಮ ಬಿಡುಗಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2026-27 ಶೈಕ್ಷಣಿಕ ಅವಧಿಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ 9 ರಿಂದ 12 ನೇ ತರಗತಿಗಳಿಗೆ ಹೊಸ ಪಠ್ಯಕ್ರಮವನ್ನು ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ, ಕೌಶಲ್ಯ ಆಧಾರಿತ ಶಿಕ್ಷಣ ಮತ್ತು ಆಧುನಿಕತೆಗೆ ಹೆಚ್ಚು ಒತ್ತು ನೀಡಲಾಗಿದೆ.

ವೆಬಿನಾರ್ ದ್ವಾರಕಾದ CBSE ಇಂಟಿಗ್ರೇಟೆಡ್ ಆಫೀಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ಮಾಹಿತಿ ಹಚ್ಚಿಕೊಳ್ಳಲಾಯಿತು. ಈ ವೇಳೆ ಶಾಲೆಗಳ ಪ್ರಾಂಶುಪಾಲರು, ಶಿಕ್ಷಕರು ಮತ್ತು ಶಿಕ್ಷಣ ತಜ್ಞರು ಭಾಗವಹಿಸಿದ್ದರು.

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಆಧಾರದಲ್ಲಿ ಹೊಸ ಪಠ್ಯಕ್ರಮವನ್ನು ಸಿದ್ದಪಡಿಸಲಾಗಿದೆ. ಮಕ್ಕಳು ಬಾಯಿಪಾಠ ಮಾಡುವ ಬದಲು ವಿವರಿಸುವ ಮೂಲಕ, ಪ್ರಾಯೋಗಿಕ ಜ್ಞಾನದ ಮೇಲೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜೊತೆಗೆ ಚಿಂತನೆಗಳು, ಸರಳವಾಗಿ ಸಮಸ್ಯೆ ಪರಿಹಾರ ಮತ್ತು ಅಪ್ಲಿಕೇಶನ್ ಆಧಾರಿತ ಕಲಿಕೆಗೆ ಆದ್ಯತೆ ನೀಡಲಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಅಧ್ಯಯನದ ಹೊರೆ ಕಡಿಮೆ ಮಾಡುವುದು ಉದ್ದೇಶವಾಗಿದೆ.

ಅದೇ ರೀತಿ ಹೊಸ ಪಠ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ, ಸ್ಪರ್ಧಾತ್ಮಕ ವಿಚಾರ ಮತ್ತು ಡಿಜಿಟಲ್ ಕೌಶಲ್ಯಗಳ ಅಧ್ಯಯನ ಇರಲಿದ್ದು, ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರಕ್ಕೂ ಮಹತ್ವ ನೀಡಲಾಗಿದೆ. ಶಿಕ್ಷಕರು ಕೇವಲ ಬರೆಯುವುದಲ್ಲ, ದೃಶ್ಯ, ವಿಡಿಯೋ, ಪ್ರೆಸೆಂಟೇಶನ್ ಮೂಲಕವೂ ವಿಷಯವನ್ನು ವಿವರಿಸಬಹುದು ಎಂದು ತಿಳಿಸಿದೆ.

ಹೊಸ ಪಠ್ಯಕ್ರಮವನ್ನು ಶಾಲೆಗಳು ತಕ್ಷಣ ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲು ಸೂಚಿಸಲಾಗಿದೆ. ಇದಕ್ಕೆ ಅನುಗುಣವಾಗಿ ಪಾಠ ಮಾಡುವಂತೆ ಹಾಗೂ ಮಾರ್ಗಸೂಚಿ ಪಾಲಿಸುವಂತೆ ನಿರ್ದೇಶನ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !