August 25, 2026
Tuesday, August 25, 2026
spot_img

ಭಾರತಕ್ಕೆ ತೈಲ, ಎಲ್‌ಎನ್‌ಜಿ ಪೂರೈಕೆಗೆ ನಾವು ರೆಡಿ: ರಷ್ಯಾದಿಂದ ಸಿಕ್ಕಿತು ಭರವಸೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಅಭಾವ ಹೆಚ್ಚುತ್ತಿದ್ದು, ಇದರ ನಡುವೆ ಭಾರತಕ್ಕೆ ಬೇಕಾದ ತೈಲ, ಎಲ್‌ಎನ್‌ಜಿ ಪೂರೈಕೆಗೆ ನಾವು ಸಿದ್ಧ ಎಂದು ರಷ್ಯಾ ಭರವಸೆ ನೀಡಿದೆ.

ಈಗಾಗಲೇ ಭಾರತ ರಷ್ಯಾದಿಂದ ಸುಮಾರು 6 ಕೋಟಿ ಬ್ಯಾರಲ್‌ ಕಚ್ಚಾ ತೈಲವನ್ನು ಖರೀದಿಸಿದ್ದು, ಇದರ ಜೊತೆಗೆ ಹಾರ್ಮುಜ್‌ ಜಲಸಂಧಿ ಮೂಲಕ ಇಂಧನ ಹೊತ್ತ ಹಡಗುಗಳು ಬರುತ್ತಿವೆ. ಇವುಗಳ ನಡುವೆ ಭಾರತಕ್ಕೆ ಬೇಕಿರುವ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಪೂರೈಕೆಯನ್ನು ಹೆಚ್ಚಿಸುವ ಸಲುವಾಗಿ ನಾವು ಉತ್ಪಾದನೆ ಜಾಸ್ತಿ ಮಾಡಲು ಸಿದ್ಧ ಎಂದು ಹೇಳಿದೆ.

ಈ ಕುರಿತು ಮಾಹಿತಿ ನೀಡಿದ ರಷ್ಯಾದ ಉಪ ಪ್ರಧಾನಿ ಡೆನಿಸ್ ಮಾಂಟುರೊವ್, ಭಾರತದ ಇಂಧನ ಬೇಡಿಕೆಯನ್ನು ಪೂರೈಸಲು ರಷ್ಯಾದ ಕಂಪನಿಗಳು ಸಿದ್ಧವಿದ್ದು, ಅದಕ್ಕಾಗಿ ಇಂಧನ ರಫ್ತುಗಳ ಸಾಮರ್ಥ್ಯ ಹೆಚ್ಚಿಸುವ ಗುರಿ ಹೊಂದಿವೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿರುವ ರಷ್ಯಾದ ರಾಯಭಾರ ಕಚೇರಿ ಕೂಡ ಈ ಕುರಿತು ಮಾಹಿತಿ ನೀಡಿದ್ದು, ಪರಮಾಣು ಶಕ್ತಿಯಲ್ಲಿ ತಮ್ಮ ಪಾಲುದಾರಿಕೆಯನ್ನು ಉಭಯ ರಾಷ್ಟ್ರಗಳು ಮತ್ತಷ್ಟು ಬಲಪಡಿಸಲಿದ್ದು, ಅವಧಿಗೆ ಅನುಗುಣವಾಗಿ ವಿದ್ಯುತ್ ಘಟಕಗಳನ್ನು ನಿರ್ಮಿಸುವ ಯೋಜನೆಯನ್ನು ಕಾರ್ಯಗತಗೊಳಿಸಲಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿರುವ ಹೊತ್ತಿನಲ್ಲಿ ರಷ್ಯಾ ಈ ಹೇಳಿಕೆ ಮಹತ್ವ ಪಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !