ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಾಗಿ ತನ್ನ ಹೊಸ ಜವಾಬ್ದಾರಿ ಪೂರೈಸೋಕೂ ಮುನ್ನ ವಧುವೊಬ್ಬಳು ದೇಶದ ಪ್ರಜೆಯಾಗಿ ತನ್ನ ಕರ್ತವ್ಯ ನಿಭಾಯಿಸಿದ್ದಾಳೆ.
ಚಿಕ್ಕಮಗಳೂರಿನ ಮೂಡಿಗೆರೆಯ ಕುಂದೂರಿನ ತಳವಾರ ಗ್ರಾಮದ ಸುಮಿಕ್ಷಾ ಹಸೆಮಣೆ ಏರುವ ಮುನ್ನ ವಧುವಾಗಿ ಅಲಂಕಾರಗೊಂಡು ಮಂಟಪಕ್ಕೆ ತೆರಳುವ ಮುನ್ನ ವೋಟ್ ಮಾಡಿ ಹೋಗಿದ್ದಾಳೆ. ಇಂದು ಮೂಡಿಗೆರೆ ಪಟ್ಟಣದ ಪ್ರೀತಂ ಹಾಲ್ನಲ್ಲಿ ಮದುವೆ ನಡೆಯಲಿದೆ.