ಮಕ್ಕಳಿದ್ದಾರೆ ಅಂತ ರಿಕ್ವೆಸ್ಟ್‌ ಮಾಡಿ ಬೇಗ ಹೋಗಿ ವೋಟ್‌ ಮಾಡಿದೆ: ಅಮೂಲ್ಯ ಜಗದೀಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆರ್.ಆರ್ ನಗರ ಮತ ಕೇಂದ್ರದಲ್ಲಿ ನಟಿ ಅಮೂಲ್ಯ ಹಾಗೂ ಪತಿ ಜಗದೀಶ್‌ ವೋಟ್‌ ಮಾಡಿದ್ದಾರೆ.
ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅರ್ಧ ಗಂಟೆ ಕಾದು ನಂತರ ಮುಂದಿದ್ದವರಿಗೆ ರಿಕ್ವೆಸ್ಟ್‌ ಮಾಡಿ ಬೇಗ ಮತದಾನ ಮಾಡಿದ್ದಾರೆ.

ಮತದಾನದ ನಂತರ ಮಾತನಾಡಿದ ಅಮೂಲ್ಯ, ತುಂಬಾ ಕ್ಯೂ ಇತ್ತು. ಜನರ ಸಂಖ್ಯೆ ಹೆಚ್ಚಾಗುತ್ತಿರೋದನ್ನು ನೋಡಿ ಖುಷಿ ಆಯ್ತು. ಮಕ್ಕಳಿರೋದ್ರಿಂದ ರಿಕ್ವೆಸ್ಟ್ ಮಾಡಿದೆ, ಬೇಗ ಬಿಟ್ರು. ಸಮಯ ಎಷ್ಟಾದರೂ ಆಗಲಿ, ಕ್ಯೂ ಎಷ್ಟಾದರೂ ಇರಲಿ. ಇದು ನಮ್ಮ ಕರ್ತವ್ಯ ವೋಟ್‌ ಮಾಡಕೇಬೇಕು. ಇನ್ನು ವಯಸ್ಸಾದವರು, ಅನಾರೋಗ್ಯ ಹಾಗೂ ಮಕ್ಕಳು ಇರುವವರು ಬಂದರೆ ಅವರಿಗೆ ಸ್ವಲ್ಪ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!