ನಿದ್ದೆಯಲ್ಲಿದ್ದವರ ಮೇಲೆ ಬಿದ್ದ ನಿರ್ಮಾಣ ಹಂತದ ಕಟ್ಟಡ, ಎರಡು ತಿಂಗಳ ಕಂದಮ್ಮ ಸೇರಿ ಇಬ್ಬರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಕ್ನೋದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದುಬಿದ್ದಿದ್ದು, ಎರಡು ತಿಂಗಳ ಕೂಸು ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ನಡುರಾತ್ರಿಯಲ್ಲಿ ಕಟ್ಟಡ ಕುಸಿದುಬಿದ್ದಿದ್ದು, 14 ಕಾರ್ಮಿಕರು ಗಾಯಗೊಂಡಿದ್ದಾರೆ. ಕಾರ್ಮಿಕ ಮುಕದಮ್ ಹಾಗೂ ಅವರ ಎರಡು ತಿಂಗಳ ಕಂದಮ್ಮ ಐಶ್ಯಾ ನಿದ್ದೆಯಲ್ಲಿದ್ದ ವೇಳೆ ಕಟ್ಟಡ ಕುಸಿದಿದ್ದು ಅವಶೇಷಗಳಡಿ ಹೂತುಹೋಗಿದ್ದಾರೆ.

ಅದೇ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ನೆಲಮಾಳಿಗೆಯಲ್ಲಿ ವಾಸವಿದ್ದರು, ಅವರ ಮೇಲೆ ಕಟ್ಟಡ ಬಿದ್ದಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!