VIRAL VIDEO| ಪೊಲೀಸ್‌ ವಾಹನದ ಮೇಲೆ ಯುವತಿ ರೀಲ್ಸ್‌, ಅನುಮತಿ ನೀಡಿದ ಅಧಿಕಾರಿ ಅಮಾನತು

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಯುವತಿಯ ಇನ್‌ಸ್ಟಾ ರೀಲ್‌ ಹುಚ್ಚಿಗೆ ಪೊಲೀಸ್ ಅಧಿಕಾರಿ ತನ್ನ ಕೆಲಸ ಕಳೆದುಕೊಂಡ ಘಟನೆ ಪಂಜಾಬ್‌ನಲ್ಲಿ ನಡೆದಿದೆ.  ಪೊಲೀಸ್ ವಾಹನದ ಮೇಲೆ ಕುಳಿತು ರೀಲ್ ಮಾಡಲು ಅನುಮತಿ ನೀಡಿದ ಪೊಲೀಸ್ ಅಧಿಕಾರಿಯನ್ನು ಉನ್ನತ ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ.

ಯುವತಿಯೊಬ್ಬಳು ಪೊಲೀಸ್ ವಾಹನದ ಮೇಲೆ ಕುಳಿತು ತನ್ನ ಬೆರಳುಗಳಿಂದ ಆಕ್ಷೇಪಾರ್ಹ ಸನ್ನೆಗಳನ್ನು ಮಾಡುತ್ತಾಳೆ. ಈ ವಿಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಉನ್ನತ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಅನುಮತಿ ಕೊಟ್ಟ ಜಲಂಧರ್‌ನ ಸ್ಟೇಷನ್ ಹೌಸ್ ಆಫೀಸರ್ ಅಶೋಕ್ ಶರ್ಮಾ ಅವರನ್ನು ಅಮಾನತುಗೊಳಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!