ಬೀದಿ ನಾಯಿಗೆ ತಿಂಡಿ ನೀಡುತ್ತಿದ್ದ ಯುವತಿಯ ಮೇಲೆ ಹರಿದ ಕಾರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಚಂಡೀಗಢದಲ್ಲಿ ರಸ್ತೆ ಬದಿಯಲ್ಲಿ ನಾಯಿಗೆ ತಿಂಡಿ ನೀಡುತ್ತಿದ್ದ ಯುವತಿಯ (Woman) ಮೇಲೆ ಕಾರೊಂದು (Car) ಹರಿದ ಘಟನೆ ನಡೆದಿದೆ.

ತೇಜಸ್ವಿತಾ (25) ಎಂಬ ಯುವತಿ ರಸ್ತೆ ಬದಿಯಲ್ಲಿ ಬೀದಿ ನಾಯಿಗೆ (Dog) ಆಹಾರ ನೀಡುತ್ತಿದ್ದಳು. ಈ ವೇಳೆ ಅತಿವೇಗವಾಗಿ ಬಂದ ಕಾರೊಂದು ತೇಜಸ್ವಿತಾ ಮೇಲೆ ಹರಿದಿದೆ. ಈ ವೇಳೆ ರಕ್ತದ ಮಡುವಿನಲ್ಲಿ ಮಲಗಿದ್ದ ತೇಜಸ್ವಿತಾಳನ್ನು ನೋಡಿದ ತಾಯಿ ಪೊಲೀಸರಿಗೆ ಹಾಗೂ ಮನೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಹೆಚ್ಚಿನ ಚಿಕಿತ್ಸೆಯ ಪಡೆಯುತ್ತಿದ್ದಾಳೆ. ಘಟನೆ ವೇಳೆ ತೇಜಸ್ವಿತಾ ಆಕೆಯ ತಲೆಗೆ ಗಂಭೀರ ಗಾಯವಾಗಿದ್ದು, ವೈದ್ಯರು ಆಕೆಯ ತಲೆ 2 ಬದಿಯಲ್ಲೂ ಹೊಲಿಗೆ ಹಾಕಿದ್ದಾರೆ.

ತೇಜಸ್ವಿತಾ ಆರ್ಕಿಟೆಕ್ಟ್ ಪದವೀಧರರಾಗಿದ್ದು, ಯುಪಿಎಸ್‍ಸಿಗೆ ತಯಾರಿ ನಡೆಸುತ್ತಿದ್ದಾಳೆ. ತೇಜಸ್ವಿತಾ ತಾಯಿಯೊಂದಿಗೆ ಬೀದಿನಾಯಿಗೆ ತಿಂಡಿ ನೀಡಲು ಮಾರುಕಟ್ಟೆಗೆ ಹೋಗಿದ್ದಳು ಎಂದು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ತೇಜಸ್ವಿನಿಯ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಾಹನ ಹಾಗೂ ಚಾಲಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!