ಕರ್ತವ್ಯ ನಿರತ ಪೊಲೀಸ್ ಕೆನ್ನೆಗೆ ಹೊಡೆದ ಶಾಸಕನ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ ಬಿಜೆಪಿ ಶಾಸಕ ಸುನೀಲ್ ಕಾಂಬ್ಳೆ ವಿರುದ್ಧ ಪ್ರಕರಣ ದಾಖಲಾಗಿದೆ.

ಪುಣೆಯ ಸಸೂನ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುನೀಲ್ ಕಾಂಬ್ಳೆ ಕರ್ತವ್ಯನಿರತ ಪೊಲೀಸ್ ಅಧಿಕಾರಿಯ ಕೆನ್ನೆಗೆ ಹೊಡೆದಿದ್ದರು. ವೇದಿಕೆಯಿಂದ ಇಳಿಯುತ್ತಿದ್ದ ಸುನೀಲ್ ಅವರ ಮೈಮುಟ್ಟಿದ ಕಾರಣಕ್ಕೆ ಸಿಟ್ಟಾದ ಕಾಂಬ್ಳೆ ಎಲ್ಲರೆದುರು ಕೆನ್ನೆಗೆ ಹೊಡೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೊ, ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ನಾನು ಹೊಡೆದಿಲ್ಲ ಆದರೆ ತಳ್ಳಿದ್ದೇನೆ ಅಷ್ಟೆ. ಮೈಮೇಲೆ ಬಿದ್ದರು ಅದಕ್ಕೆ ತಳ್ಳಿದ್ದೇನೆ, ಕೆನ್ನೆಗೆ ಹೊಡೆದಿಲ್ಲ ಎಂದು ಕಾಂಬ್ಳೆ ಹೇಳಿದ್ದಾರೆ. ಆದರೆ ವಿಡಿಯೋದಲ್ಲಿ ಕೆನ್ನೆಗೆ ಹೊಡೆದಿರುವ ಸಾಕ್ಷಿಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!