ಅಮೆರಿಕನ್ ಹಿಂದುಗಳಲ್ಲಿ ವಿವೇಕ ರಾಮಸ್ವಾಮಿ ಗುರುತಿಸಿರೋ ಕೊರತೆ ಯಾವುದು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸುವುದಕ್ಕೆ ಬಯಸಿರುವ ವಿವೇಕ ರಾಮಸ್ವಾಮಿ ತಮ್ಮ ಮಾತುಗಾರಿಕೆಯಿಂದ ಅಲ್ಲಿನ ಮತದಾರರಲ್ಲಿ ಅಭಿಪ್ರಾಯ ರೂಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಲವು ಮಾಧ್ಯಮ ವೇದಿಕೆಗಳಲ್ಲಿ ಅವರು ಸಂದರ್ಶನ ನೀಡುತ್ತಿದ್ದಾರೆ. ಇತ್ತೀಚಿನ ಪಾಡ್ಕಾಸ್ಟ್ ಒಂದರಲ್ಲಿ ಅಮೆರಿಕದ ಹಿಂದುಗಳ ಬಗ್ಗೆ ವಿವೇಕ ರಾಮಸ್ವಾಮಿ ಮಾತನಾಡಿರುವುದರಲ್ಲಿ ಕೆಲವು ಅಂಶಗಳು ಚರ್ಚೆಯಾಗುತ್ತಿವೆ.

ಅಮೆರಿಕದಲ್ಲಿರುವ ಯಹೂದಿಗಳಿಗೆ ಹೋಲಿಸಿದರೆ ಹಿಂದುಗಳು ತಮ್ಮ ಸಂಪ್ರದಾಯವನ್ನು ಗಟ್ಟಿಗೊಳಿಸಿಕೊಳ್ಳುವಲ್ಲಿ ಅಷ್ಟು ಬಿರುಸಾಗಿಲ್ಲ ಎಂಬ ಅಭಿಪ್ರಾಯ ವಿವೇಕ ರಾಮಸ್ವಾಮಿ ಅವರದ್ದು. ಅಮೆರಿಕದ ಹಿಂದು ದೇವಾಲಯಗಳಲ್ಲಿ ಆಚರಣೆಗಳಿವೆ. ಆದರೆ, ಯಹೂದಿಗಳು ಮತ್ತು ಕ್ರೈಸ್ತ ಮತದ ಪಾದ್ರಿಗಳಿಗೆ ಹೋಲಿಸಿದರೆ ಮತಗ್ರಂಥಗಳನ್ನು ಇವತ್ತಿನ ಕಾಲಕ್ಕೆ ಪ್ರಸ್ತುತಗೊಳಿಸುವ, ಪುಸ್ತಕದಲ್ಲಿರುವುದನ್ನು ಕಣ್ಣಿಗೆ ಕಟ್ಟಿದಂತೆ ವಾಸ್ತವಕ್ಕೆ ಸಮೀಕರಿಸುವ ಕೆಲಸ ಹಿಂದುಗಳಿಂದ ಆಗುತ್ತಿಲ್ಲ. ಸಂಸ್ಕೃತದ ಪ್ರಾರ್ಥನೆಯನ್ನು ಹೆಚ್ಚಿನವರು ಅರ್ಥಮಾಡಿಕೊಳ್ಳುವುದೇ ಇಲ್ಲ. ಈ ವಿಚಾರದಲ್ಲಿ ಅಮೆರಿಕದ ಹಿಂದುಗಳು ಸಮುದಾಯ ಭಾವನೆಯಿಂದ ಇನ್ನಷ್ಟು ಕೆಲಸ ಮಾಡಬೇಕಿದೆ ಎಂದು ವಿವೇಕ ರಾಮಸ್ವಾಮಿ ಹೇಳಿದ್ದಾರೆ.

ಹಿಂದುಗಳ ಅಮೆರಿಕ ವಲಸೆ ಗಟ್ಟಿಯಾಗಿರುವುದು ಕಳೆದ ಐವತ್ತು ವರ್ಷಗಳ ವಿದ್ಯಮಾನ. ಹೀಗಾಗಿ, ಕಾಲ ಕಳೆದಂತೆ ಅಮೆರಿಕ ಹಿಂದುಗಳು ಈ ವಿಚಾರದಲ್ಲೂ ಗಟ್ಟಿಯಾಗುವ ಬಗ್ಗೆ ವಿಶ್ವಾಸವಿದೆ ಎಂದೂ ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!