February 18, 2026
Wednesday, February 18, 2026
spot_img

ಓಲಾ-ಊಬರ್‌ಗೆ ಸವಾಲು: ಇಂದಿನಿಂದ ಬೀದಿಗಿಳಿಯಲಿವೆ ‘ಭಾರತ್ ಟ್ಯಾಕ್ಸಿ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಕ್ಯಾಬ್ ಸೇವಾ ಕ್ಷೇತ್ರದಲ್ಲಿ ಹೊಸ ಪ್ರಯತ್ನವಾಗಿ ‘ಭಾರತ್ ಟ್ಯಾಕ್ಸಿ’ ಎಂಬ ಸಹಕಾರಿ ಮಾದರಿಯ ಟ್ಯಾಕ್ಸಿ ಸೇವೆ ಗುರುವಾರದಿಂದ ಅಧಿಕೃತವಾಗಿ ಆರಂಭವಾಗುತ್ತಿದೆ.

ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಆರಂಭಗೊಳ್ಳುತ್ತಿರುವ ಈ ಸೇವೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ.

ಈ ಸೇವೆಯ ವಿಶೇಷತೆ ಎಂದರೆ, ಇದು ಲಾಭಕಾಂಕ್ಷೆಗಿಂತ ಸಹಕಾರಿ ತತ್ವದ ಮೇಲೆ ನಿರ್ಮಾಣವಾಗಿದೆ. ಚಾಲಕರೇ ಈ ವ್ಯವಸ್ಥೆಯ ಭಾಗಸ್ವಾಮಿಗಳಾಗಿದ್ದು, ಸಂಸ್ಥೆಯನ್ನು ಸಹಕಾರ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ನಿರ್ವಹಿಸುತ್ತದೆ. ಚಾಲಕರು ಇಲ್ಲಿ ‘ಸಾರಥಿಗಳು’ ಎಂದು ಕರೆಯಲ್ಪಡುತ್ತಾರೆ. ಅವರು ಸಂಸ್ಥೆಯಲ್ಲಿ ಕೆಲವು ಷೇರುಗಳನ್ನು ಖರೀದಿಸಿ ಸದಸ್ಯರಾಗಬಹುದು. ಕನಿಷ್ಠ ಐದು ಷೇರುಗಳನ್ನು ತೆಗೆದುಕೊಳ್ಳಬಹುದಾಗಿದ್ದು, ಸಂಸ್ಥೆಯ ಬೆಳವಣಿಗೆಯೊಂದಿಗೆ ಡಿವಿಡೆಂಡ್ ಲಾಭವೂ ಪಡೆಯುವ ಅವಕಾಶ ಇದೆ.

ಇದನ್ನೂ ಓದಿ:

ಪ್ರಮುಖವಾಗಿ, ಇತರ ಆ್ಯಪ್ ಆಧಾರಿತ ಕ್ಯಾಬ್‌ಗಳಲ್ಲಿ ಇರುವಂತೆ ಹೆಚ್ಚಿನ ಕಮಿಷನ್ ಇಲ್ಲಿ ಇಲ್ಲ. ಇದರಿಂದ ಚಾಲಕರಿಗೆ ಹೆಚ್ಚಿನ ಆದಾಯ ದೊರೆಯುವ ಸಾಧ್ಯತೆ ಇದ್ದರೆ, ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಸೇವೆ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.

ಪ್ರಾರಂಭಿಕ ಹಂತದಲ್ಲಿ ಎಸಿ, ನಾನ್-ಎಸಿ ಕ್ಯಾಬ್‌ಗಳು, ಎಕ್ಸ್‌ಎಲ್ ವಾಹನಗಳು, ಆಟೋ ಹಾಗೂ ಬೈಕ್ ಟ್ಯಾಕ್ಸಿ ಸೇವೆಗಳೂ ಲಭ್ಯವಾಗಲಿವೆ. ಅಮೂಲ್ ಸೇರಿದಂತೆ ಹಲವು ಸಹಕಾರಿ ಸಂಸ್ಥೆಗಳ ಬೆಂಬಲದಿಂದ ಈ ಯೋಜನೆ ರೂಪುಗೊಂಡಿದ್ದು, ಖಾಸಗಿ ಕ್ಯಾಬ್ ಕಂಪನಿಗಳಿಗೆ ಸ್ಪರ್ಧೆ ನೀಡುವ ನಿರೀಕ್ಷೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !