SHOCKING | ಆಟವಾಡುತ್ತಾ ಆಸ್ಪತ್ರೆಯ ಮೂರನೇ ಮಹಡಿಯಿಂದ ಬಿದ್ದ ಮಗು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಖನೌನ ಆಸ್ಪತ್ರೆಯೊಂದರ ಮೂರನೇ ಮಹಡಿಯಲ್ಲಿ ಆಟವಾಡುತ್ತಿದ್ದ ಮಗು ಕಾಲು ಜಾರಿ ಕೆಳಕ್ಕೆ ಬಿದ್ದಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ.

ಕಣ್ಣಿನ ಚಿಕಿತ್ಸೆಗಾಗಿ ಪೋಷಕರು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಮಾಹಿಯನ್ನು ಕರೆದುಕೊಂಡು ಬಂದಿದ್ದರು. ಮೂರನೇ ಮಹಡಿಯಲ್ಲಿ ನೇತ್ರ ತಪಾಸಣೆ ನಡೆಯುತ್ತಿತ್ತು, ಮಾಹಿ ಅಲ್ಲಿಯೇ ಆಟವಾಡುತ್ತಿದ್ದಳು. ಆಕೆಯ ಮೇಲೆ ನಿಮಿಷಕ್ಕೆ ಗಮನ ಹರಿಸದೇ ಇದ್ದ ವೇಳೆ ಕಾಲು ಜಾರಿ ಸೀದ ನೆಲಮಹಡಿಗೆ ಬಿದ್ದಿದ್ದಾಳೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ತಕ್ಷಣವೇ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ. ತಲೆ ಹಾಗೂ ದೇಹದ ಇತರ ಭಾಗಗಳಿಗೆ ಗಾಯಗಳಾಗಿದ್ದು, ಮಗುವಿಗೆ ಉಸಿರಾಟದ ಸಮಸ್ಯೆಯಾಗಿದೆ. ಆಂಬ್ಯು ಬ್ಯಾಗ್ ಮೂಲಕ ಆಕ್ಸಿಜನ್ ಒದಗಿಸಲಾಗುತ್ತಿದ್ದು, ವೈದ್ಯರು ಮಗುವನ್ನು ಉಳಿಸಲು ಎಲ್ಲಾ ಪ್ರಯತ್ನ ಪಡುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!