Tuesday, March 28, 2023

Latest Posts

ಕೈಯಲ್ಲಿ ಊಟದ ತಟ್ಟೆ ಹಿಡಿದು ಸಂಪ್‌ಗೆ ಬಿದ್ದ ಮಗು, ಅಂಗನವಾಡಿ ಸಿಬ್ಬಂದಿ ವಿರುದ್ಧ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೀದರ್‌ನಲ್ಲಿ ಮೂರು ವರ್ಷದ ಮಗು ಅಂಗನವಾಡಿಯ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ಮೃತಪಟ್ಟಿದೆ.

ಔರಾದ್ ಪಟ್ಟಣದ ಟೀಚರ‍್ಸ್ ಕಾಲೋನಿಯ ಅಂಗನವಾಡಿಯಲ್ಲಿ ಊಟದ ತಟ್ಟೆ ಹಿಡಿದು ನಡೆದು ಬರುತ್ತಿದ್ದ ಮಗು ಸ್ಫೂರ್ತಿ ಆಯತಪ್ಪಿ ಟ್ಯಾಂಕ್‌ಗೆ ಬಿದ್ದು ಮೃತಪಟ್ಟಿದೆ.

ಅಂಗನವಾಡಿ ಸಿಬ್ಬಂದಿ ನಿರ್ಲಕ್ಷ್ಯನಿಂದ ಮಗು ಮೃತಪಟ್ಟಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಔರಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!