Tuesday, October 3, 2023

Latest Posts

ನಾಟಕ ಮಾಡುವಾಗಲೇ ಹೃದಯಾಘಾತದಿಂದ ಹಾಸ್ಯಕಲಾವಿದ ಸಾವು

ಹೊಸದಿಗಂತ ವರದಿ, ವಿಜಯಪುರ:

ನಾಟಕದ ವೇಳೆ ಹಾಸ್ಯಕಲಾವಿದ ಕುಸಿದು ತೀವ್ರ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಡೆದಿದೆ.

ಡ್ಯಾನ್ಸ್ ಮಾಡುವಾಗಲೇ ಶರಣು ಬಾಗಲಕೋಟೆ (24) ಮೃತಪಟ್ಟ ದುರ್ದೈವಿ.

ಮೂಲತಃ ಪೋಸ್ಟ್ ಮ್ಯಾನ್‌ ವೃತ್ತಿ ಮಾಡುತ್ತಿದ್ದ ಶರಣು ಬಾಗಲಕೋಟೆ, ಗ್ರಾಮದ ಮುಕ್ತಾಂಕಾರ ಜಾತ್ರೆ ನಿಮಿತ್ತ ಹಮ್ಮಿಕೊಂಡ, ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ ನಾಟಕ ಪ್ರದರ್ಶನ ವೇಳೆ ಡಾನ್ಸ್ ಮಾಡುತ್ತಿದ್ದ ಸಂದರ್ಭ ವೇದಿಕೆಯಲ್ಲಿಯೆ ಅಸುನೀಗುವಂತಾಗಿದೆ.

ಇತ್ತೀಚೆಗೆ ಪೋಸ್ಟ್ ಮ್ಯಾನ್ ಆಗಿ ಶರಣು ನೇಮಕಗೊಂಡಿದ್ದ, ಜಾತ್ರೆಯ ಸಂಭ್ರಮದಲ್ಲಿ ನಡೆದ ಯುವಕನ ಸಾವಿಗೆ ಗ್ರಾಮಸ್ಥರು ಮಮ್ಮಲ ಮರಗುವಂತಾಗಿದೆ.

ತಿಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!