ಹೊಸ ದಿಗಂತ ವರದಿ,ತಿಪಟೂರು:
ತಾಲೂಕು ಕಿಬ್ಬನಹಳ್ಳಿ ಹೋಬಳಿ ಅರಳಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಾಪುರ ಗ್ರಾಮದ ಪಕ್ಕ ಇರುವ ಭದ್ರಾಪುರ ಕೆರೆಯಲ್ಲಿ ಹಸುವನ್ನು ಮೈ ತೊಳೆಯಲು ಹೋಗಿ ದಂಪತಿ ಆಕಸ್ಮಿಕವಾಗಿ ಕಾಲಿ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಮೃತರನ್ನು ಪಾಲಾಕ್ಷಯ್ಯ ಬಿನ್ ಮಹಾಲಿಂಗಯ್ಯ ಹಾಗೂ ನಿರ್ಮಲ ಕೊಂ ಪಾಲಾಕ್ಷಯ್ಯ ಎಂದು ಗುರುತಿಸಲಾಗಿದೆ.
ಇಬ್ಬರು ಕೆರೆಯಲ್ಲಿ ಹಸುವನ್ನು ಮೈ ತೊಳೆಯಲು ಹೋಗಿದ್ದು, ಈ ವೇಳೆ ಓರ್ವ ಆಕಸ್ಮಿಕವಾಗಿ ಕಾಲಿ ಜಾರಿ ಬಿದ್ದಿದ್ದಾರೆ . ಈ ವೇಳೆ ಅವರನ್ನು ರಕ್ಷಿಸಲು ಹೋಗಿ ಮತ್ತೊಬ್ಬರು ಬಿದ್ದು ಮೃತಪಟ್ಟಿದ್ದಾರೆ.
ಮೃತ ದೇಹಗಳು ಕೆರೆಯಲ್ಲಿ ತೇಲುತ್ತಿರುವಾಗ ಗ್ರಾಮಸ್ಥರಿಗೆ ತಿಳಿದು ಕಿಬ್ಬನಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.