COVID ALERT | ಕಲಬುರಗಿಗೆ ಕಾಲಿಟ್ಟ ಕೋವಿಡ್ -19 ರೂಪಾಂತರಿ

ಹೊಸದಿಗಂತ ವರದಿ ಕಲಬುರಗಿ:

ದೇಶಾದ್ಯಂತ ಕೋವಿಡ್ 19ನ ರೂಪಾಂತರಿ ಹರಡುತ್ತಿದ್ದು,ಇದೀಗ ಕಲಬುರಗಿಯಲ್ಲಿ ಸಹ ಮೊದಲ ಕೋವಿಡ್ ವೈರಸ್ ರೂಪಾಂತರಿ ಪತ್ತೆಯಾಗಿದೆ.

ಕೋವಿಡ್ -19 ಪರೀಕ್ಷೆ ಮೊದಲ ದಿನವೇ ಓರ್ವ ಬಾಲಕಿಯಲ್ಲಿ ಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದ್ದು,ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕೃತವಾಗಿ ಮಾಹಿತಿ ನೀಡಿದೆ.

ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ ಬಾಲಕಿಗೆ ಕೋವಿಡ್ ಸೋಂಕು ದೃಡಪಟ್ಟಿದ್ದು, ಕ್ಷಯರೋಗ ಚಿಕಿತ್ಸೆ ಸಲುವಾಗಿ ಡಿ.23 ರಂದು ಬಾಲಕಿ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಳು. ನಿರಂತರ ಜ್ಜರ ಕಂಡು ಬಂದಿರುವುದರಿಂದ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಪರೀಕ್ಷೆ ವೇಳೆ ಸೋಂಕು ತಗುಲಿದ್ದು ದೃಡಪಟ್ಟಿದೆ.

ಇನ್ನೂ ಬಾಲಕಿಯ ಸಂಪರ್ಕಕ್ಕೆ ಬಂದವರನ್ನು ಐಸೋಲೇಷನ್ ಮಾಡಲು ಕಲಬುರಗಿ ಆರೋಗ್ಯ ಅಧಿಕಾರಿ ಸೂಚನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!