ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಒಂದು ಲೀಟರ್ ಹಾಲಿಗೆ 1.50 ರೂ. ದರ ಇಳಿಕೆ ಮಾಡಿದ್ದು, ರೈತರಿಗೆ ಶಾಕ್ ನೀಡಿದೆ.
ಹೈನುಗಾರಿಕೆ ನಂಬಿದ್ದ ರೈತರಿಗೆ ಬೇಸರದ ಸುದ್ದಿ ಇದಾಗಿದ್ದು, ಮನ್ಮುಲ್ ದರ ಇಳಿಸಿ ಆದೇಶ ಹೊರಡಿಸಿದೆ. ಹಾಲಿನ ದರ ಇಳಿಕೆ ಜೊತೆಗೆ ಪಶು ಆಹಾರದ ಬೆಲೆ ಏರಿಕೆ ಮಾಡಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ಹಿಂದೆ ಹಾಲು ಉತ್ಪಾದಕರಿಗೆ ಹಾಲಿನ ದರ ಲೀಟರ್ಗೆ 33.50 ರೂಪಾಯಿ ಇತ್ತು. ಇದನ್ನು 32 ರೂಪಾಯಿಗೆ ಇಳಿಸಲಾಗಿದೆ. ಇನ್ನು ಪಶು ಆಹಾರದ ಬೆಲೆ ಚೀಲಕ್ಕೆ 50 ರೂಪಾಯಿಯಂತೆ ಏರಿಕೆ ಮಾಡಲಾಗಿದೆ.