ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಗೆ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ತೇಲಿ ಬಂದ ಜಾನುವಾರೊಂದು ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೊಪ್ಪದ ಗಂಡಿ ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡವಾಗಿ ಕಟ್ಟಲಾಗಿರುವ
ಸೇತುವೆಯಲ್ಲಿ ಸಿಕ್ಕಿ ಪ್ರಾಣ ಬಿಟ್ಟಿರುವ ದಾರುಣ ಘಟನೆ ನಡೆದಿದೆ. ಇದರ ಮಾಲೀಕರು ಯಾರು, ಇದು ಹೇಗೆ ನೀರಿನ ಸೆಳೆತಕ್ಕೆ ಸಿಲುಕಿತು ಎಂಬುದು ಗೊತ್ತಾಗಿಲ್ಲ.