August 24, 2026
Monday, August 24, 2026
spot_img

ಗದಗದಲ್ಲಿ ಅನಧಿಕೃತ ಪೋಸ್ಟರ್‌ಗಳಿಗೆ ಬ್ರೇಕ್: ನಗರಸಭೆಯಿಂದ ತೆರವು ಕಾರ್ಯಾಚರಣೆ ಆರಂಭ

ಹೊಸದಿಗಂತ ವರದಿ ಗದಗ:

ನಗರದಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಪೋಸ್ಟರ್‌ಗಳ ತೆರವು ಕಾರ್ಯಾಚರಣೆಯನ್ನು ಗದಗ–ಬೆಟಗೇರಿ ನಗರಸಭೆಯಿಂದ ಸೋಮವಾರ ಆರಂಭಿಸಲಾಯಿತು.

ಭೂಮರಡ್ಡಿ ವೃತ್ತ ಹಾಗೂ ಮಹಾತ್ಮ ಗಾಂಧಿ ವೃತ್ತದಲ್ಲಿ ಅಳವಡಿಸಿದ್ದ 7 ಅನಧಿಕೃತ ಪೋಸ್ಟರ್‌ಗಳನ್ನು ನಗರಸಭೆ ಸಿಬ್ಬಂದಿ ತೆರವು ಮಾಡಿದರು.

ಸೂಚನೆ ನೀಡಿದರೂ ನಿರ್ಲಕ್ಷ್ಯ

‘ಕಾನೂನು ಪ್ರಕಾರ ನಿಗದಿತ ತೆರಿಗೆ ಪಾವತಿಸದೆ, ನಗರಸಭೆಯಿಂದ ಪರವಾನಗಿ ಪಡೆಯದೆ ‍ಪೋಸ್ಟರ್‌ಗಳನ್ನು ಅಳವಡಿಸಲಾಗಿತ್ತು. ಹೀಗೆ ಮಾಡದಂತೆ ಹಲವರು ಬಾರಿ ಸೂಚನೆ ನೀಡಿದರೂ ನಿರ್ಲಕ್ಷ್ಯ ವಹಿಸಿದ್ದರು. ಇಂತಹ ಪೋಸ್ಟರ್‌ಗಳಿಂದ ಸಂಚಾರಕ್ಕೂ ತೊಂದರೆ ಉಂಟಾಗಿತ್ತು’ ಎಂದು ‌ಗದಗ–ಬೆಟಗೇರಿ ನಗರಸಭೆಯ ಕಂದಾಯ ಅಧಿಕಾರಿ ಮಹೇಶ ಹಡಪದ ತಿಳಿಸಿದರು.

‘ನಗರಸಭೆಯಿಂದಲೇ ತೆರವು ಕಾರ್ಯಾಚರಣೆ ಆರಂಭಿಸಲಾಗಿದ್ದು, ಪೋಸ್ಟರ್‌ಗಳನ್ನು ಅಳವಡಿಸುವವರಿಗೂ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ವಿವಿಧೆಡೆ ಇರುವ ಅನಧಿಕೃತ ಪೋಸ್ಟರ್‌ಗಳನ್ನು ತೆರವುಗೊಳಿಸಲಾಗುವುದು’ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !