ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ದೇಶದಲ್ಲಿ ಕ್ರಿಕೆಟ್ ಅಂದ್ರೆ ಬರಿ ಆಟ ಅಲ್ಲ, ಅದೊಂದು ಎಮೋಷನ್. ಇದೀಗ ಭಾರತೀಯ ಕ್ರಿಕೆಟ್ ತಂಡ ಜಪಾನ್ ನೆಲಕ್ಕೆ ಕಾಲಿಟ್ಟು, ಹೊಸ ಚರಿತ್ರೆ ಬರೆಯೋಕೆ ರೆಡಿಯಾಗಿದೆ. ಸೆಪ್ಟೆಂಬರ್ 22 ರಂದು ಭಾರತ ಮತ್ತು ಜಪಾನ್ ನಡುವೆ ಐತಿಹಾಸಿಕ ಟಿ20 ಪಂದ್ಯ ನಡೆಯಲಿದೆ.
ಭಾರತ ಮತ್ತು ಜಪಾನ್ ದೇಶಗಳ ನಡುವೆ ರಾಜತಾಂತ್ರಿಕ ಬಾಂಧವ್ಯ ಶುರುವಾಗಿ 75 ವರ್ಷಗಳು ಪೂರೈಸಿವೆ. ಈ ’75 ನೇ ವರ್ಷದ ದೋಸ್ತಿ’ಯನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡೋಕೆ ಮತ್ತು ಜಪಾನ್ ದೇಶದಲ್ಲಿ ಬೇಸ್‌ಬಾಲ್ ಮಧ್ಯೆ ಕ್ರಿಕೆಟ್ ಕ್ರೀಡೆಯನ್ನು ಜನಪ್ರಿಯಗೊಳಿಸೋಕೆ ಬಿಸಿಸಿಐ ಹಾಗೂ ಜಪಾನ್ ಕ್ರಿಕೆಟ್ ಅಸೋಸಿಯೇಷನ್ ಸೇರಿ ಈ ಬಿಗ್ ಪ್ಲಾನ್ ಮಾಡಿವೆ.
ಈ ಮ್ಯಾಚ್ ಜಪಾನ್‌ನ ತೋಚಿಗಿ ಪ್ರಾಂತ್ಯದಲ್ಲಿರೋ ‘ಸಾನೊ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ’ದಲ್ಲಿ ನಡೆಯಲಿದೆ. ಜಪಾನ್‌ನ ಲೋಕಲ್ ಟೈಮ್ ಪ್ರಕಾರ ಮಧ್ಯಾಹ್ನ 1:00 ಗಂಟೆಗೆ ಪಂದ್ಯ ಶುರುವಾದರೆ, ನಮಗೆ ಇಂಡಿಯಾದಲ್ಲಿ ಬೆಳಗ್ಗೆ 9:30 ಕ್ಕೆ ಸರಿಯಾಗಿ ಕ್ರಿಕೆಟ್ ಸ್ಟಾರ್ಟ್ ಆಗಲಿದೆ.
ಟಿವಿಯಲ್ಲಿ ಮ್ಯಾಚ್ ನೋಡಿ ಎಂಜಾಯ್ ಮಾಡೋರಿಗೆ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರಪ್ರಸಾರ ಸಿಗಲಿದೆ. ಇನ್ನು ಮೊಬೈಲ್‌ನಲ್ಲೇ ಮ್ಯಾಚ್ ಲೈವ್ ನೋಡ್ತೀವಿ ಅನ್ನೋರಿಗೆ ‘ಫ್ಯಾನ್‌ಕೋಡ್’ ಆ್ಯಪ್ ಮತ್ತೆ ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಸಿಗಲಿದೆ.
ಈ ಮುಂಚೆ ಭಾರತ ಮತ್ತು ಜಪಾನ್ ತಂಡಗಳು ಬರಿ ಏಷ್ಯನ್ ಗೇಮ್ಸ್‌ನಂತಹ ಮಲ್ಟಿ-ಸ್ಪೋರ್ಟ್ಸ್ ಈವೆಂಟ್‌ಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ ಎರಡು ದೇಶಗಳು ಪ್ರತ್ಯೇಕ ದ್ವಿಪಕ್ಷೀಯ ಸರಣಿ ಮಾದರಿಯಲ್ಲಿ ಮುಖಾಮುಖಿಯಾಗುತ್ತಿರೋದು ನಿಜಕ್ಕೂ ಗ್ರ್ಯಾಂಡ್ ಮೊಮೆಂಟ್. ಟಿ20 ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಇಂಪ್ರೂವ್ ಆಗಿರೋ ಜಪಾನ್ ತಂಡಕ್ಕೆ, ಟಿ20 ವರ್ಲ್ಡ್ ಚಾಂಪಿಯನ್ಸ್ ಆದ ಭಾರತದ ವಿರುದ್ಧ ಆಡೋದು ಅವರ ಕ್ರಿಕೆಟ್ ಹಿಸ್ಟರಿಯಲ್ಲೇ ದೊಡ್ಡ ಮೈಲಿಗಲ್ಲು.
ಒಟ್ಟಿನಲ್ಲಿ ರಾಜತಾಂತ್ರಿಕ ಗೆಳೆತನಕ್ಕೆ ಕ್ರಿಕೆಟ್ ಬ್ಯಾಟ್‌ನಿಂದ ಗಿಫ್ಟ್ ಸಿಕ್ಕಂತಾಗಿದ್ದು, ಸೆಪ್ಟೆಂಬರ್ 22ಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬೆಳಗ್ಗೆಯೇ ಎಂಟರ್‌ಟೈನ್‌ಮೆಂಟ್ ಸಿಗೋದು ಗ್ಯಾರಂಟಿ.



