ಒಂದು ಕೈಯಲ್ಲಿ ಊರುಗೋಲು, ಇನ್ನೊಂದು ಕೈಯಲ್ಲಿ ಧ್ವಜ: ಯುವಕರನ್ನೂ ನಾಚಿಸುತ್ತಿದೆ ಈ ‘ತರುಣ’ನ ಹೆಜ್ಜೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ್ ಜೋಡೋ ಯಾತ್ರೆಯಲ್ಲಿ ಯುವಕರನ್ನೂ ನಾಚಿಸುವಂತೆ ಹೆಜ್ಜೆಹಾಕುತ್ತಿರುವ ಈ ‘ತರುಣ’ ಈಗ ಎಲ್ಲರ ಗಮನಸೆಳೆದಿದ್ದಾರೆ.
ಒಂದು ಕೈಯಲ್ಲಿ ಊರುಗೋಲು, ಇನ್ನೊಂದು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕುತ್ತಿರುವ ಕರುಣಾ ಪ್ರಸಾದ್ ಮಿಶ್ರಾ ಎಂಬ ಈ ವ್ಯಕ್ತಿಗೆ ವಯಸ್ಸು ಕೇವಲ ಎಂಭತ್ತ ಎಂಟು!
ಭಾರತ್ ಜೋಡೋ ಮಧ್ಯಪ್ರದೇಶ ತಲುಪಿದ ಸಂದರ್ಭ ಯಾತ್ರೆಯೊಂದಿಗೆ ಸೇರಿಕೊಂಡ ಮಿಶ್ರಾ, ನಿಮಗೆ ಸುಸ್ತಾಗುವುದಿಲ್ಲವೇ ಎಂಬ ಪ್ರಶ್ನೆಗೆ, ನಾನು ಕಾಶ್ಮೀರದವರೆಗೂ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆಂದು ಉಜ್ಜೈನ್ ಮಹಾಕಾಲೇಶ್ವರ ದೇವಸ್ಥಾನದಲ್ಲಿ ಶಪಥ ಮಾಡಿದ್ದೇನೆ. ಲಾಲ್‌ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸುವವರೆಗೂ ನಾನು ನಡೆಯುತ್ತೇನೆ. ಬಳಿಕ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆ ನಡೆಸುವ ಸಂಕಲ್ಪವನ್ನೂ ಮಾಡುತ್ತೇನೆ ಎಂದು ಉತ್ತರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!