ಪ್ರಾನ್ಸ್ ನ ಫಿಫಾ ಸಾಧನೆಗೆ ಖುಷ್: ತಂಡಕ್ಕೆ ಟ್ವಿಟರ್ ನಲ್ಲಿ ಬೆನ್ತಟ್ಟಿದ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫಿಫಾ ಫುಟ್‌ಬಾಲ್ ವಿಶ್ವಕಪ್‌ನಲ್ಲಿ ರನ್ನರ್‌ಅಪ್ ಆದ ಫ್ರಾನ್ಸ್ ತಂಡಕ್ಕೆ ಪ್ರಧಾನಿ ಮೋದಿ ಶುಭಹಾರೈಕೆ ನೀಡಿದ್ದಾರೆ.
ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಫಿಫಾ ವಿಶ್ವಕಪ್‌ನಲ್ಲಿ ಉತ್ಸಾಹಭರಿತ ಪ್ರದರ್ಶನ ನೀಡಿದ ಫ್ರಾನ್ಸ್ ತಂಡಕ್ಕೆ ಅಭಿನಂದನೆಗಳು. ಫೈನಲ್ ಪಂದ್ಯದಲ್ಲಿ ತಮ್ಮ ಕೌಶಲ ಹಾಗೂ ಕ್ರೀಡಾ ಮನೋಭಾವದಿಂದ ನೀವು ಫುಟ್‌ಬಾಲ್ ಅಭಿಮಾನಿಗಳ ಮನಸ್ಸು ಗೆದ್ದಿದ್ದೀರಿ, ಎಲ್ಲರಿಗೂ ನಿಮ್ಮ ಆಟದಿಂದ ಖುಷಿಯಾಗಿದೆ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!