ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡಿ ಸಂಸದೆ ಕಂಗನಾ ರಣಾವತ್ ಗೆ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ಕರೆಂಟ್ ಶಾಕ್ ಕೊಟ್ಟಿದೆ.
ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ನಟಿಯ ಮನೆಯಲ್ಲಿ ಅವರು ವಾಸವಾಗಿಲ್ಲ. ಆದರೂ ಸರ್ಕಾರ ಒಂದು ಲಕ್ಷ ರೂಪಾಯಿ ಬಿಲ್ ಮಾಡಿದ್ದು, ಕರೆಂಟ್ ಶಾಕ್ ಕೊಟ್ಟಿದೆ.
ಇತ್ತ ಈ ಪರಿಯ ಬಿಲ್ ನೋಡಿ ನಟಿ, ಸಂಸದೆ ಕಂಗನಾ ಗರಂ ಆಗಿದ್ದು ಹಿಮಾಚಲ ಪ್ರದೇಶದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಂಗನಾ ರಣಾವತ್ ಭಾಗವಹಿಸಿದ್ದರು, ಅಲ್ಲಿ ಅವರು ರಾಜ್ಯದ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಮನಾಲಿಯ ತಮ್ಮ ಮನೆಯಲ್ಲಿ ಭಾರಿ ಪ್ರಮಾಣದ ವಿದ್ಯುತ್ ಬಿಲ್ ಬಂದಿದ್ದು, ಅಲ್ಲಿ ಅವರು ವಾಸಿಸುವುದೇ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಯಾರೂ ವಾಸವಾಗದ ಮನೆಯೂ ಕರೆಂಟ್ ಬಿಲ್ ಕೊಡುವ ಕಾಂಗ್ರೆಸ್ನ ನಡವಳಿಗೆ ನಾಚಿಕೆಗೇಡಿನದ್ದು. ರಾಜ್ಯದಲ್ಲಿ, ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಇನ್ನು ಸಾಮಾನ್ಯ ಜನರ ಸ್ಥಿತಿ ಹೇಗಾಗಿರಬೇಡ ಎಂದು ಕಂಗನಾ ಪ್ರಶ್ನಿಸಿದ್ದಾರೆ.
ಸಾಮಾನ್ಯ ಜನರ ಗೋಳು ಯಾರಿಗೂ ಬೇಡವಾಗಿದೆ. ಈ ರೀತಿ ಎರ್ರಾಬಿರ್ರಿ ವಿದ್ಯುತ್ ಬಿಲ್ ಬಂದರ ಜನರ ಗತಿಯೇನು? ಅವರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಬೇಕಾ? ಎಂಥ ಸ್ಥಿತಿ ಬಂದಿದೆ ಎಂದೆಲ್ಲಾ ಕಿಡಿ ಕಾರಿದ್ದಾರೆ. ಖಾಲಿ ಮನೆಗಾಗಿ ಇಷ್ಟು ಹೆಚ್ಚಿನ ಬಿಲ್ ರಾಜ್ಯದ ಆಡಳಿತದ ಬಗ್ಗೆ ಕೆಟ್ಟದಾಗಿ ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.