November 5, 2026
Thursday, November 5, 2026
spot_img

ಶೂಟಿಂಗ್ ಸೆಟ್‌ನಲ್ಲಿ ಅಪ್ಪ-ಮಗಳ ಕ್ಯೂಟ್‌ ಬಂಧ: ರಣ್‌ಬೀರ್ ಶ್ರಮಕ್ಕೆ ಆಲಿಯಾ ಭಾವುಕ ಪೋಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಮೂರು ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ನಿತೀಶ್ ತಿವಾರಿ ನಿರ್ದೇಶನದ ಮಹತ್ವಾಕಾಂಕ್ಷೆಯ ಸಿನಿಮಾ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಅಂತಿಮವಾಗಿ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದೆ. ಈ ದೃಶ್ಯಕಾವ್ಯವು ಮೊದಲ ದಿನವೇ ಪ್ರೇಕ್ಷಕರಿಂದ ಅಭೂತಪೂರ್ವ ಮತ್ತು ಧನಾತ್ಮಕ ಪ್ರಶಂಸೆಗಳನ್ನು ಪಡೆದುಕೊಳ್ಳುತ್ತಿದೆ.

ಸಿನಿಮಾ ಬಿಡುಗಡೆಯ ಸಂಭ್ರಮದ ನಡುವೆ ನಟಿ ಆಲಿಯಾ ಭಟ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೂಟಿಂಗ್ ಸೆಟ್‌ನ ಕೆಲವು ಅಪರೂಪದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ರಣ್‌ಬೀರ್ ಕಪೂರ್ ಅವರು ಸಾಹಸ ಸನ್ನಿವೇಶದ ಚಿತ್ರೀಕರಣದಲ್ಲಿದ್ದಾಗ, ತಮ್ಮ ಮುದ್ದು ಮಗಳು ರಾಹಾ ಸೆಟ್‌ಗೆ ಭೇಟಿ ನೀಡಿದ್ದಳು. ಬಿಡುವಿಲ್ಲದ ಶೂಟಿಂಗ್‌ ಮಧ್ಯೆಯೂ ರಣ್‌ಬೀರ್ ಮಗಳ ಜೊತೆ ಸಮಯ ಕಳೆಯುತ್ತಿರುವ ದೃಶ್ಯ ಪ್ರೇಕ್ಷಕರ ಮನ ಗೆದ್ದಿದೆ.

https://www.instagram.com/p/DfWwreZDMmX/?utm_source=ig_web_button_share_sheet

ಈ ಸುಂದರ ಕ್ಷಣಗಳನ್ನು ಹಂಚಿಕೊಂಡು ಆಲಿಯಾ ಭಟ್, “ಈ ಸಿನಿಮಾಗಾಗಿ ನೀನು ನಿನ್ನ ಸಂಪೂರ್ಣ ಶ್ರಮವನ್ನು ಹಾಕಿದ್ದೀಯ. ಆದರೂ ಮಗಳಿಗಾಗಿ ನಿನ್ನಲ್ಲಿ ಅಷ್ಟೇ ಪ್ರೀತಿ ಉಳಿದಿತ್ತು. ರಣ್‌ಬೀರ್, ನಿನ್ನನ್ನು ಹಾಗೂ ಈ ಅಪರೂಪದ ಅನುಭವವನ್ನು ನೋಡಿ ಹೆಮ್ಮೆಯಾಗುತ್ತದೆ. ಕೆಲವು ಕಥೆಗಳು ನಮ್ಮೆಲ್ಲರಿಗಿಂತ ದೊಡ್ಡದಾಗಿರುತ್ತವೆ, ಅದರಲ್ಲಿ ರಾಮಾಯಣವೂ ಒಂದು” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಬರೋಬ್ಬರಿ 4000 ಕೋಟಿ ಬಜೆಟ್‌ನಲ್ಲಿ ಮೂಡಿಬಂದಿದೆ ಎಂದು ವರದಿಯಾಗಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವಿ ದುಬೆ ಹಾಗೂ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ದಾರೆ. ಹಾಲಿವುಡ್‌ಗೂ ಸವಾಲು ಹಾಕುವಂತಹ ಗ್ರಾಫಿಕ್ಸ್ ಮತ್ತು ಸಂಸ್ಕೃತಿಯ ಮೂಲ ಕಥೆಗೆ ಯಾವುದೇ ಧಕ್ಕೆ ತರದೆ ಅದ್ಭುತವಾಗಿ ಚಿತ್ರಿಸಿರುವ ಬಗ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Must Read

Skip to toolbar