November 5, 2026
Thursday, November 5, 2026
spot_img

ಹಾಸನಾಂಬೆ ದರುಶನಕ್ಕೆ ಜನಸಾಗರ: 7 ದಿನಗಳಲ್ಲಿ 16 ಲಕ್ಷ ಭಕ್ತರು ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಿಯ ದರುಶನೋತ್ಸವಕ್ಕೆ ಭಕ್ತರ ಮಹಾಪೂರವೇ ಹರಿದುಬರುತ್ತಿದೆ. ದರುಶನ ಆರಂಭವಾದ ಏಳು ದಿನಗಳಲ್ಲೇ 16 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರುಶನ ಪಡೆದಿದ್ದು, ದೇವಾಲಯಕ್ಕೆ 13 ಕೋಟಿ ರೂ.ಗೂ ಹೆಚ್ಚು ಆದಾಯ ಸಂಗ್ರಹವಾಗಿದೆ. ಈ ನಡುವೆ ಪ್ರೋಟೋಕಾಲ್ ದರ್ಶನದ ವಿಚಾರವಾಗಿ ಉಂಟಾದ ಗೊಂದಲವೂ ಚರ್ಚೆಗೆ ಗ್ರಾಸವಾಗಿದೆ.

ದರುಶನಕ್ಕೆ ಹೆಚ್ಚಿದ ಜನಸಂದಣಿ

ಉಳಿದ ಐದು ದಿನಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ. ದರುಶನದ ಸಮಯ ಕಡಿಮೆ ಮಾಡಲು ನೈವೇದ್ಯದ ಅವಧಿ ಕಡಿತಗೊಳಿಸಲಾಗಿದ್ದು, ವಿಐಪಿ ಮತ್ತು ಪ್ರೋಟೋಕಾಲ್ ದರುಶನಕ್ಕೆ ನಿಯಂತ್ರಣ ಹೇರಲಾಗಿದೆ. ಸಾಮಾನ್ಯ ಭಕ್ತರು ತಾಳ್ಮೆಯಿಂದ ಸರತಿ ಸಾಲಿನಲ್ಲಿ ನಿಲ್ಲುವಂತೆ ಡಿಸಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:

ಪ್ರೋಟೋಕಾಲ್ ಗಲಾಟೆಗೆ ಕ್ಷಮೆ

ಇನ್ನೊಂದೆಡೆ, ರಾಮನಗರ ಮತ್ತು ಕನಕಪುರದಿಂದ ಪ್ರೋಟೋಕಾಲ್‌ನಲ್ಲಿ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ದರುಶನ ವ್ಯವಸ್ಥೆಯಲ್ಲಿ ತೊಂದರೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಗ್ರಾಮ ಲೆಕ್ಕಾಧಿಕಾರಿ ಮನು ಹಾಗೂ ಮತ್ತೊಬ್ಬ ಅಧಿಕಾರಿ ಸುಪ್ರೀತ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಕಾರ್ಯಕರ್ತರನ್ನು ಸಮಾಧಾನಪಡಿಸಿದ ಡಿಸಿ ಲತಾ ಕುಮಾರಿ, ಪ್ರೋಟೋಕಾಲ್ ಲೋಪಕ್ಕಾಗಿ ಕ್ಷಮೆ ಕೇಳಿದ್ದು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಭಕ್ತರ ಮಹಾಪೂರದ ನಡುವೆ ಸುಗಮ ದರುಶನ ವ್ಯವಸ್ಥೆ ಕಲ್ಪಿಸುವುದು ಹಾಗೂ ಪ್ರೋಟೋಕಾಲ್ ಗೊಂದಲಗಳನ್ನು ನಿಯಂತ್ರಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.

Must Read

Skip to toolbar