ಯಜಮಾನನಿಗಾಗಿ ಕೊರೆಯುವ ಚಳಿಯಲ್ಲೂ ಕಾದು ಕುಳಿತಿರುವ ನಾಯಿ: ಕಣ್ಣಂಚನ್ನು ತೇವಗೊಳಿಸುತ್ತೆ ಈ ಸ್ಟೋರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಜಗತ್ತಿನಲ್ಲಿ ಮನುಷ್ಯನ ಅದ್ಭುತ ಸ್ನೇಹಿತ ಅಂದ್ರೆ ಅದು ನಾಯಿ,ಬೆಕ್ಕು ಅಂದರೆ ತಪ್ಪಾಗಲಾರದು. ಇವುಗಳು ಮನುಷ್ಯನೊಂದಿಗೆ ಕಂಡುಕೊಳ್ಳುವ ಭಾವನಾತ್ಮಕ ನಂಟು ಮನುಷ್ಯ ಮನುಷ್ಯರ ನಡುವೆಯೇ ಕೂಡ ಇರುವುದಿಲ್ಲ.

ಅದರಲ್ಲೂ ಶ್ವಾನ ಹಾಗೂ ಮಾನವರ ನಡುವಿನ ಸ್ನೇಹ ಇನ್ನೂ ಒಂದು ಹೆಜ್ಜೆ ಮುಂದೆ. ಒಂದು ಬಾರಿ ತುಂಡು ರೊಟ್ಟಿ ಹಾಕಿದರೆ ಸಾಕು, ಕಟ್ಟ ಕಡೆಯ ಉಸಿರು ಇರುವವರೆಗೂ ಅದು ತನ್ನ ನಿಯತ್ತನ್ನು ಬದಲಿಸುವುದಿಲ್ಲ. ಇದೀಗ ಅದೇ ರೀತಿಯ ನಿಯತ್ತಿನ ಸ್ಟೋರಿ ಇಲ್ಲಿದೆ…

ರಷ್ಯಾದಲ್ಲಿ ಒಂದು ಶ್ವಾನ ಜಗತ್ತಿನ ಗಮನ ಸೆಳೆದಿದೆ. ಜನರು ಕೂಡ ಸಾಕು ಕಾಯ್ದಿದ್ದು ಮನೆಗೆ ಹೋಗು ಅವನಿನ್ನು ಬರುವುದಿಲ್ಲ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ಆದರೂ ಕೂಡ ಆ ಶ್ವಾನ ತಾನು ಕುಳಿತ ಜಾಗದಿಂದ ಒಂದಿಂಚೂ ಕೂಡ ಕದಲುತ್ತಿಲ್ಲ.

ರಷ್ಯಾದಲ್ಲಿ ಭೀಕರ ಚಳಿಗಾಲ, ನದಿಗಳು ಮೇಲ್ಮೈ ಹೆಪ್ಪುಗಟ್ಟಿಕೊಂಡಿರುತ್ತದೆ ಒಳಗೆ ನದಿ ವೇಗವಾಗಿ ಹರಿಯುತ್ತಿರುತ್ತದೆ. ಅದೇ ರೀತಿ ರಷ್ಯಾದ ಉಫಾ ನದಿಯೂ ಕೂಡ ಈಗ ಹೆಪ್ಪುಗಟ್ಟಿದ್ದು, ಇಲ್ಲಿ ಗೆ 59 ವರ್ಷದ ವ್ಯಕ್ತಿ ತನ್ನ ನಾಯಿಯೊಂದಿಗೆ ಬಂದು ಸೈಕಲ್ ಸವಾರಿ ಮಾಡುವಾಗ ಹೆಪ್ಪುಗಟ್ಟಿದ ನದಿಯ ಮೇಲ್ಮೈ ಒಡೆದು, ನದಿಯೊಳಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ. ಬಳಿಕ ಅವನ ರಕ್ಷಣೆಗಾಗಿ ರಕ್ಷಣಾ ತಂಡ ಹರಸಾಹಸ ಪಟ್ಟಿದೆ. ಶೋಧಕಾರ್ಯವನ್ನು ತೀವ್ರಗೊಳಿಸಿ ನೋಡಿದಾಗ ನದಿಯ ಆಳದಲ್ಲಿ 59 ವರ್ಷದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಆದ್ರೆ ತನ್ನ ಯಜಮಾನನ ಸಾವನ್ನು ಆ ಸಾಕು ನಾಯಿ ‘ಬೆಲ್ಕಾ’ ಒಪ್ಪುತ್ತಿಲ್ಲ.

Imageಈ ಘಟನೆ ನಡೆದು ಈಗಾಗಲೇ ನಾಲ್ಕು ದಿನಗಳು ಕಳೆದಿವೆ. ಆದ್ರೆ ‘ಬೆಲ್ಕಾ’ ಮಾತ್ರ ಮಾಲೀಕ ಕಳೆದು ಹೋದ ಜಾಗದಿಂದ ಕದಲಿಲ್ಲ. ಅದೇ ನದಿಯ ದಂಡೆಯ ಮೇಲೆ ಅವನು ಮತ್ತೆ ಬರುತ್ತಾನೆ ಎಂದು ಕಾಯುತ್ತಾ ಕುಳಿತಿದೆ. ಕುಟುಂಬದವರು ಅದನ್ನು ಒತ್ತಾಯ ಮಾಡಿ ಕರೆದುಕೊಂಡು ಹೋದರು ಕೂಡ ಅದು ಮತ್ತೆ ಓಡೋಡಿ ಅದೇ ಜಾಗದಲ್ಲಿ ಬಂದು ಕೂರುತ್ತಿದೆ. ಈ ಒಂದು ದೃಶ್ಯ ಎಂತವರ ಕಣ್ಣಂಚನ್ನು ಕೂಡ ತೇವಗೊಳಿಸುತ್ತಿದೆ.

Imageಇನ್​ಸ್ಟಾಗ್ರಾಮ್​ನಲ್ಲಿ ‘ಬೆಲ್ಕಾ’ ತನ್ನ ಮಾಲೀಕನಿಗಾಗಿ ಕಾಯುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಬ್ರುಟ್ಅಮೆರಿಕಾ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಈ ಒಂದು ವಿಡಿಯೋ ಪೋಸ್ಟ್ ಆಗಿದ್ದು ಇದು ಸಖತ್ ವೈರಲ್ ಆಗಿದೆ. ನಾಯಿಯ ಪ್ರಾಮಾಣಿಕತೆಗೆ ಎಲ್ಲರೂ ಶರಣು ಅನ್ನುತ್ತಿದ್ದಾರೆ.

 

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!