ಹೊಸದಿಗಂತ ವರದಿ, ಅಂಕೋಲಾ:
ಮನೆಯೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಕಲಬೇಣದಲ್ಲಿ ಸಂಭವಿಸಿದ್ದು ಲಕ್ಷಾಂತರ ರೂಪಾಯಿ ಹಾನಿಯಿಂದಾಗಿ ಮನೆಯ ಮಾಲೀಕರು ದಿಕ್ಕು ತೋಚದಂತಾಗಿದ್ದಾರೆ.
ಸಕಲಬೇಣದ ರಾಮದಾಸ ನಾಯ್ಕ ಮತ್ತು ರಾಧಿಕಾ ದಂಪತಿಗೆ ಸೇರಿದ ಮನೆಯಲ್ಲಿ ಬೆಂಕಿ ಹೊತ್ತಿ ಉರಿದು ಮನೆಯಲ್ಲಿ ಇರುವ ವಸ್ತುಗಳು,ಆಭರಣ, ನಗದು ಹಣ, ಕಾಗದ ಪತ್ರಗಳು ಉರಿದು ಬೂದಿಯಾಗಿವೆ.
ಮನೆಯ ಮಾಲಿಕರು ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆ ತೆರಳಿರುವ ಸಂದರ್ಭದಲ್ಲಿ ಬೆಂಕಿ ತಗುಲಿ ಮನೆ ಸಂಪೂರ್ಣವಾಗಿ ಉರಿದಿದ್ದು ಸುತ್ತ ಮುತ್ತಲಿನ ಜನರು ಬೆಂಕಿ ಆರಿಸಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.