Tuesday, March 21, 2023

Latest Posts

ಬಹು ವರ್ಷಗಳ ಕನಸು ನನಸು: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದಿದ ಮೊದಲ ವಿಮಾನ!

ಹೊಸದಿಗಂತ ವರದಿ, ಶಿವಮೊಗ್ಗ:

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಂಗಳವಾರ ಮೊದಲ ವಿಮಾನ ಸುರಕ್ಷಿತವಾಗಿ ಬಂದಿಳಿದಿದೆ. ಈ ಮೂಲಕ ಬಹು ವರ್ಷಗಳ ವಿಮಾನ ಹಾರಾಟದ ಕನಸು ನನಸಾಗಿದೆ.

ವಾಯು ಸೇನೆಗೆ ಸೇರಿದ ಬೋಯಿಂಗ್-737-7ಹೆಚ್1 ಮಾದಿರಯ ವಿಮಾನ ಶಿವಮೊಗ್ಗ ತಲುಪಿದೆ. ಮಧ್ಯಾಹ್ಮ 12.30 ಕ್ಕೆ ದೆಹಲಿಯಿಂದ ಹೊರಟು, ಮಧ್ಯಾಹ್ನ 2.30ರ ವೇಳೆಗೆ ಶಿವಮೊಗ್ಗ ವಿಮಾನದ ರನ್‌ವೇನಲ್ಲಿ ಬಂದಿಳಿಯಿತು.

ವಿಮಾನ ಬಂದಿಳಿಯುವ ಸುದ್ದಿ ತಿಳಿಯುತ್ತಲೇ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದವರು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಉತ್ಸಾಹ ನೂರ್ಮಡಿಸಿತ್ತು. ಎಲ್ಲರೂ ತಮ್ಮ ಮೊಬೈಲ್‌ಗಳಲ್ಲಿ ಮೊದಲ ವಿಮಾನದ ಹಾರಾಟವನ್ನು ಸೆರೆ ಹಿಡಿದರು. ಈ ವಿಡಿಯೋ ಮತ್ತುಪೋಟೋಗಳು ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು.

ವಾಟರ್ ಸಲ್ಯೂಟ್
ಮೊದಲ ವಿಮಾನ ಬಂದಿಳಿದ ಹಿನ್ನೆಲೆಯಲ್ಲಿ ಗೌರವಾರ್ಥವಾಗಿ ಎರಡು ಅಗ್ಮಿ ಶಾಮಕ ದಳದ ಜೆಟ್‌ಗಳಿಂದ ವಾಟರ್ ಸಲ್ಯೂಟ್ ಸಲ್ಲಿಸಲಾಯಿತು. ಕೆಲ ಹೊತ್ತಿನ ಬಳಿಕ ಕೆಲ ಪರೀಕ್ಷೆಗಳನ್ನು ನಡೆಸಿ ದೆಹಲಿಯತ್ತ ವಾಯು ಸೇನಾ ವಿಮಾನ ಪ್ರಯಾಣ ಬೆಳೆಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!