Tuesday, March 28, 2023

Latest Posts

ಕಲ್ಯಾಣ ಕನಾ೯ಟಕ ಉತ್ಸವ: ಹಸಿರು ನಿಶಾನೆ ತೋರುವ ಮೂಲಕ ಕೆ.ಕೆ.ರನ್ ಮ್ಯಾರಥಾನ್ ಗೆ ಚಾಲನೆ

ಹೊಸದಿಗಂತ ವರದಿ, ಕಲಬುರಗಿ:

ಕಲ್ಯಾಣ ಕರ್ನಾಟಕ ಉತ್ಸವ-2023ರ ಅಂಗವಾಗಿ ಮಂಗಳವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಕೆ.ಕೆ.ರನ್ (ಮ್ಯಾರಾಥಾನ್) ಸ್ಪರ್ಧೆಗೆ ಕಲ್ಯಾಣ ಕನಾ೯ಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾಯ೯ದಶಿ೯ ಅನಿರುದ್ಧ ಶ್ರವಣ,ಕಲಬುರಗಿ ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ್ ಸೇರಿದಂತೆ ಹಲವು ಅಧಿಕಾರಿಗಳು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

17 ವರ್ಷದೊಳಗಿನ ಬಾಲಕರ (5 ಕಿ.ಮೀ.) ಓಟವು ಕೆ.ಕೆ.ಆರ್.ಡಿ.ಬಿ. ಕಚೇರಿಯಿಂದ ಆರಂಭಗೊಂಡು ಜಗತ್ ಸರ್ಕಲ್-ಡಿ.ಸಿ. ಕಚೇರಿ ಮೂಲಕ ಮರಳಿ ಕೆ.ಕೆ.ಆರ್.ಡಿ.ಬಿ.ಕಚೇರಿಗೆ ಮತ್ತು 17 ವರ್ಷ ಮೇಲ್ಪಟ್ಟ ಪುರುಷ ಮುಕ್ತ (10 ಕಿ.ಮೀ.) ಓಟವು ಕೆ.ಕೆ.ಆರ್.ಡಿ.ಬಿ. ಕಚೇರಿಯಿಂದ ಆರಂಭಗೊಂಡು, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ-ಜಿಲ್ಲಾ
ನ್ಯಾಯಾಲಯ-ಶರಣಬಸವೇಶ್ವರ ದೇವಸ್ಥಾನ-ಸಂಗೊಳ್ಳಿ ರಾಯಣ್ಣ ಸರ್ಕಲ್ (ಮಾರ್ಕೇಟ್)-ಜಗತ್ ಸರ್ಕಲ್-ಡಿ.ಸಿ. ಕಚೇರಿ ಮೂಲಕ ಕೆ.ಕೆ.ಆರ್.ಡಿ.ಬಿ. ಕಚೇರಿಗೆ ಬಂದು ತಲುಪಿತು.

ಅದೇ ರೀತಿ 17 ವರ್ಷದೊಳಗಿನ ಬಾಲಕಿಯರ (3 ಕಿ.ಮೀ.) ಓಟವು ಕೆ.ಕೆ.ಆರ್.ಡಿ.ಬಿ. ಕಚೇರಿಯಿಂದ
ಆರಂಭಗೊಂಡು, ಲಾಹೋಟಿ ಪೆಟ್ರೋಲ್ ಬಂಕ್-ಡಿ.ಸಿ. ಕಚೇರಿ ಮೂಲಕ ಸಾಗಿ ಕೆ.ಕೆ.ಆರ್.ಡಿ.ಬಿ.ಕಚೇರಿಗೆ, ಮತತ್ತು 17
ವರ್ಷ ಮೇಲ್ಪಟ್ಟ ಮಹಿಳೆಯರ ಮುಕ್ತ (5 ಕಿ.ಮೀ.) ಓಟವು ಕೆ.ಕೆ.ಆರ್.ಡಿ.ಬಿ. ಕಚೇರಿಯಿಂದ ಆರಂಭಗೊಂಡು ಜಗತ್ ಸರ್ಕಲ್-ಡಿ.ಸಿ. ಕಚೇರಿ ಮೂಲಕ ಮರಳಿ ಕೆ.ಕೆ.ಆರ್.ಡಿ.ಬಿ.ಕಚೇರಿಗೆ ಬಂದು ಕೊನೆಗೊಂಡಿತು.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಪಾಟೀಲ್ ಭುವನೇಶ್ ದೇವಿದಾಸ್,ಅರಣ್ಯ ಇಲಾಖೆ ಅಧಿಕಾರಿ ಸಂತೋಷ, ಉಪ ಆಯುಕ್ತ ಆರ್.ಪಿ.ಜಾಧವ್, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ್, ಶಿವನಗೌಡ ಪಾಟೀಲ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!