ಮೆಟ್ರೋ ಹಳಿ ಮೇಲೆ ಬಿದ್ದ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದ ಡ್ರೋನ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದ ಡ್ರೋನ್​ವೊಂದು ಮೆಟ್ರೋ ಹಳಿ ಮೇಲೆ ಬಿದ್ದ ಘಟನೆ ನಡೆದಿದೆ.
ದೆಹಲಿಯ ಜಸೋಲಾ ವಿಹಾರ್ ಬಳಿ ಮೆಟ್ರೋ ಟ್ರ್ಯಾಕ್ ಮೇಲೆ ಡ್ರೋನ್ ಬಿದ್ದಿದೆ . ಪರಿಣಾಮ ಮೆಜೆಂಟಾ ಮಾರ್ಗದ ಜಸೋಲಾ ವಿಹಾರ್‌-ಶಾಹೀನ್‌ ಬಾಗ್‌ನಿಂದ ಬೊಟಾನಿಕಲ್‌ ಗಾರ್ಡನ್‌ವರೆಗಿನ ಸಂಚಾರವು ಸುಮಾರು ಅರ್ಧ ಗಂಟೆ ಕಾಲ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್​ ಬಿದ್ದ ಮಾಹಿತಿ ಅರಿತ ದೆಹಲಿ ಪೊಲೀಸರು, ಸಿಐಎಸ್‌ಎಫ್ ಮತ್ತು ಡಿಎಂಆರ್‌ಸಿ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಡ್ರೋನ್​ಅನ್ನು ತೆರವು ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!