2 ತಿಂಗಳ ಬಳಿಕ ಉಡುಪಿ ಜಿಲ್ಲೆಯಲ್ಲಿ ಕಾಣಿಸಿಕೊಂಡ ಕೊರೋನಾ ಕೇಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಜಗತ್ತಿನಾದ್ಯಂತ ಕೋವಿಡ್ ಆತಂಕ ಹುಟ್ಟಿಸಿದ್ದು, ಉಡುಪಿಯಲ್ಲೂ ಖಾತೆಯನ್ನು ತೆರೆದಿದೆ. 2 ತಿಂಗಳ ನಂತರ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಭಾನುವಾರ ಉಡುಪಿಯಲ್ಲಿ 30, ಕುಂದಾಪುರ 28 ಮತ್ತು ಕಾರ್ಕಳ 15 ಸೇರಿ, ಜಿಲ್ಲೆಯಲ್ಲಿ 73 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಅವರಲ್ಲಿ ಉಡುಪಿ ತಾಲೂಕಿನ ಪುರುಷರೊಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಅವರಿಗೆ ಹೋಮ್ ಐಸೋಲೇಶನ್ ಮಾಡಲಾಗಿದೆ.
ಜಿಲ್ಲೆಯಲ್ಲಿ ನಿರಂತರ ಪ್ರತಿದಿನ ಸರಾಸರಿ 50ರಷ್ಟು ಕೋವಿಡ್ ಪರೀಕ್ಷೆಗಳು ನಡೆಯುತಿದ್ದರೂ, ನ.23ರಂದು 1 ಕೋವೀಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಅದರ ನಂತರ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಪ್ರಕರಣಗಳು ಪತ್ತೆಯಾಗಿರಲಿಲ್ಲ.
ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ ಇದುವರೆಗೆ ,278,550 ಮಂದಿಯನ್ನು ಕೋವೀಡ್ ಪರೀಕ್ಷೆಗೊಳಪಡಿಸಲಾಗಿದ್ದು, ಅವರಲ್ಲಿ 19,231 ಮಂದಿಗೆ ಸೋಂಕು ಪತ್ತೆಯಾಗಿದ್ದು, 56 ಮಂದಿ ಮೃತಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!