ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬ್ಯಾಟರಿ ಸರ್ಕ್ಯೂಟ್ ಆಗಿ ಬೆಲೆಬಾಳುವ ಡಸ್ಟರ್ ಕಾರು ರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಸೋಲೂರು ಶ್ರೀರಾಮ ಫೈನಾನ್ಸ್ ಕಚೇರಿ ಬಳಿ ನಡೆದಿದೆ. ಕಿರಣ್ ಗೌಡ ಎಂಬುವರಿಗೆ ಸೇರಿದ ಡಸ್ಟರ್ ಕಾರು ಬೆಂಕಿಗಾಹುತಿಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ವ್ಯಾಪ್ತಿಯಲ್ಲಿವ ಶ್ರೀರಾಮ ಫೈನಾನ್ಸ್ಗೆ ಹಣ ಕಟ್ಟಲು ಕಿರಣ್ ಗೌಡ ಬಂದಿದ್ದರು. ದುರದೃಷ್ಟವೆಂದರೆ 50 ಸಾವಿರ ರೂಪಾಯಿ ಹಣದ ಸಮೇತ ಡಸ್ಟರ್ ಕಾರು ಅಗ್ನಿಗಾಹುತಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.