ಕಲಬುರಗಿಯಲ್ಲಿ ಗಣವೇಷಧಾರಿ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲಬುರಗಿ ನಗರದ ವತಿಯಿಂದ ವಿಜಯದಶಮಿ ಉತ್ಸವದ ಅಂಗವಾಗಿ ಗಣವೇಷಧಾರಿ ಸ್ವಯಂಸೇವಕರಿಂದ ನಗರದಲ್ಲಿ ಆಕರ್ಷಕ ಪಥಸಂಚಲನ ಜರುಗಿತು.

ನಗರದ ನಗರೇಶ್ವರ ಶಾಲೆಯಿಂದ ಪ್ರಾರಂಭಗೊಂಡ ಪಥಸಂಚಲನವು, ಚಡ್ಡಿ ಹೋಟೆಲ್, ಮಿಜಗುರಿ,ಡಂಕಾ ಕ್ರಾಸ್, ಹಿಂಗುಲಾಂಬಿಕಾ ದೇವಸ್ಥಾನ, ಗಣೇಶ್ ಮಂದಿರ, ಸರಾಫ್ ಬಜಾರ್, ಜಾಜಿ ಅಂಗಡಿ ಎದುರುಗಡೆಯಿಂದ, ಕಪಡಾ ಬಜಾರ್, ಚೌಕ್, ಜನತಾ ಬಜಾರ್ ವೃತ್ತ, ಅಪ್ಪನ ಕೆರೆ ರಸ್ತೆ ಮೂಲಕ, ಲಾಲಗೇರಿ ಕ್ರಾಸ್ ಮೂಲಕ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವೇದಿಕೆ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿದ ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಬೌದ್ಧಿಕ ಪ್ರಮುಖರಾದ ದುರ್ಗಣ್ಣ ಅವರು, ಕಳೆದ ೯೯ ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವು ರಾಷ್ಟ್ರಕಟ್ಟುವ ಹಾಗೂ ಸಮಾಜಮುಖಿ ಕೆಲಸಗಳು ಮಾಡುತ್ತಾ ಹೊರಟಿದ್ದು, ಸಂಘವು ಇದೀಗ ಶತಾಬ್ದಿಯ ಹೊ‍ಸ್ತಿಲಲ್ಲಿದೆ ಎಂದರು.

ಪಥಸಂಚಲನದ ಮಾರ್ಗದೂದ್ದಕ್ಕೂ ಪುಷ್ಪಾರ್ಚನೆ ಮಾಡುವ ಮೂಲಕ ಅದ್ಧೂರಿಯಾಗಿ ಸಾರ್ವಜನಿಕರು ಸ್ವಾಗತಿಸಿದರು. ಘೋಷ, ದಂಡ ಪ್ರಯೋಗ ಹಾಗೂ ಉಪವಿಷ್ಯ ವ್ಯಾಯಾಮ ಒಳಗೊಂಡಂತೆ ಸ್ವಯಂಸೇವಕರಿಂದ ಶಾರೀರಿಕ ಪ್ರದರ್ಶನ ನಡೆಯಿತು.೫೮೩ ಸ್ವಯಂಸೇವಕರು ಪೂರ್ಣ ಗಣವೇಷದಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ವಿಭಾಗ ಪ್ರಚಾರಕ ವಿಜಯ್ ಮಹಾಂತೇಶ, ಪ್ರಾಂತ ಪ್ರಚಾರ ಪ್ರಮುಖ ಕೃಷ್ಣ ಜೋಶಿ, ಸುರೇಶ್ ಹೆರೂರ್,ಸಂಜೀವ ಹುಲಮನಿ, ಶ್ರೀಕಾಂತ್ ಸರಾಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!