ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಷ್ಟೇ ಬಡತನವಿದ್ದರೂ ಮಕ್ಕಳಿಗೆ ಕಮ್ಮಿ ಮಾಡದಂತ ಪೋಷಕರಿದ್ದಾರೆ, ಎಂಥ ಆರೋಗ್ಯ ಸಮಸ್ಯೆ ಬಂದರೂ ಜನರ ಸಹಾಯ ಕೇಳಿ, ಬೇಡಿ ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಮಕ್ಕಳಿದ್ದಾರೆ. ಆದರೆ ಪಾಕಿಸ್ತಾನದಲ್ಲಿ ತಂದೆಯೊಬ್ಬ ತನ್ನ 15ದಿನದ ಹೆಣ್ಣುಮಗುವನ್ನು ಜೀವಂತ ಸಮಾಧಿ ಮಾಡಿದ್ದಾನೆ.
ನೌಶಹ್ರೋ ಫಿರೋಜ್ ಎಂಬ ವ್ಯಕ್ತಿ ತನ್ನ ಮಗುವನ್ನು ಜೀವಂತ ಸಮಾಧಿ ಮಾಡಿದ್ದಾನೆ ಎಂದು ಹೇಳಲಾಗಿದೆ. ತನಿಖೆ ವೇಳೆ ಫಿರೋಜ್ ನಾನೇ ನನ್ನ ಕೈಯಾರೆ ಮಗುವನ್ನು ಜೀವಂತ ಸಮಾಧಿ ಮಾಡಿದ್ದೇನೆ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ತನ್ನ 15 ದಿನ ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಹಣವಿಲ್ಲ ಎಂದು, ಗೋಣಿ ಚೀಲದಲ್ಲಿ ಕಟ್ಟಿ ಹೂತಿಟ್ಟಿರುವುದಾಗಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಪೊಲೀಸರು ನೌಶಹ್ರೋ ಫಿರೋಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.