Monday, March 27, 2023

Latest Posts

ನಲ್ಲಮಾಲ ಮೀಸಲು ಅರಣ್ಯದಲ್ಲಿ ಅಗ್ನಿ ಅನಾಹುತ: 2ಕಿ.ಮೀ. ವ್ಯಾಪಿಸಿದ ಬೆಂಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಗರ್ ಕರ್ನೂಲ್ ಜಿಲ್ಲೆಯ ಅಮ್ರಾಬಾದ್ ನಲ್ಲಮಾಲ ಮೀಸಲು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆ ಆವರಿಸಿದೆ. ಶ್ರೀಶೈಲಂ ಮುಖ್ಯರಸ್ತೆಯ ಪಕ್ಕದಲ್ಲಿರುವ ದೋಮಲಪೆಂಟಾದಲ್ಲಿನ ನಲ್ಲಮಾಲ ಅರಣ್ಯ ಪ್ರದೇಶ 5 ಹೆಕ್ಟೇರ್ ವರೆಗೆ ಸುಟ್ಟು ಕರಕಲಾಗಿದೆ. ಸ್ಥಳೀಯರು ಅರಣ್ಯಾಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ನಲ್ಲಮಾಲ ಅರಣ್ಯದಲ್ಲಿ ಆಗಾಗ ಬೆಂಕಿ ಅನಾಹುತ ಸಂಭವಿಸುತ್ತಲಿದೆ. ಈ ಹಿಂದೆಯೂ ಅಮರಾಬಾದ್ ಮಂಡಲದ ದೋಮಲಪೆಂಟಾ ಮೀಸಲು ಅರಣ್ಯದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ದೋಮಲ್ಪೆಂಟಾದಿಂದ ಏಳು ಕಿಲೋಮೀಟರ್ ದೂರದ ಆಕ್ಟೋಪಸ್ ವ್ಯೂನಿಂದ ನೀಲಾರಾಮ್ ಬಂಡಾವರೆಗೆ ಬೆಂಕಿ ವ್ಯಾಪಿಸಿತ್ತು.

ಬೆಂಕಿ ಸುಮಾರು ಎರಡು ಕಿಲೋಮೀಟರ್ ವರೆಗೆ ವ್ಯಾಪಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಅಗ್ನಿಶಾಮಕ ಯಂತ್ರಗಳ ಮೂಲಕ ಬೆಂಕಿ ನಂದಿಸಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸದ ಕಾರಣ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!