ಡಾಲರ್‌ ಕೊರತೆಯಿಂದ ಕಂಗೆಟ್ಟಿದೆ ಪಾಕ್:‌ 18 ದಿನಗಳ ಆಮದಿಗಷ್ಟೇ ಇದೆ ವಿದೇಶೀ ವಿನಿಮಯ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಗ್ರರದಾಳಿಯಿಂದ ಹೈರಾಣಾಗಿರೋ ಪಾಕಿಸ್ತಾನದಲ್ಲಿ ಆರ್ಥಿಕಬಿಕ್ಕಟಿನ ಬಿಸಿ ಜನಸಾಮಾನ್ಯರ ಬದುಕನ್ನು ಸುಡುತ್ತಿದೆ. ಆಹಾರ, ಇಂಧನ ಬೆಲೆಗಳು ಗಗನಕ್ಕೇರಿದ್ದು ತನ್ನ ಪ್ರಜೆಗಳಿಗೆ ಅಗತ್ಯವಿರುವ ಪೂರೈಕೆಗಳನ್ನು ಒದಗಿಸಲು ಪಾಕ್‌ ಸರ್ಕಾರದ ಬಳಿ ಸಾಧ್ಯವಾಗುತ್ತಿಲ್ಲ. ಇದರ ಜೊತೆ ಪಾಕಿಸ್ತಾನವನ್ನು ಡಾಲರ್‌ ಕೊರತೆಯು ಬಹುವಾಗಿ ಕಾಡುತ್ತಿದ್ದು, ವಿದೇಶಿವಿನಿಮಯದ ಕೊರತೆಯುಂಟಾಗಿದ್ದು ಕನಿಷ್ಟ ಒಂದು ತಿಂಗಳನ್ನು ಪೂರೈಸಲು ಅಗತ್ಯವಿರುವಷ್ಟು ವಿದೇಶಿ ವಿನಿಮಯವೂ ಲಭ್ಯವಿಲ್ಲ.

ಕಳೆದ ಹಣಕಾಸು ವಾರದ ಅಂತ್ಯದಲ್ಲಿ ಅದರ ವಿದೇಶಿ ವಿನಿಮಯ ಮೀಸಲು ಶೇಕಡಾ 16.1 ರಷ್ಟು ಕುಸಿದು 3.09 ಶತಕೋಟಿ ಡಾಲರ್‌ ಗೆ ಬಂದು ತಲುಪಿದೆ ಎಂದು ಪಾಕಿಸ್ತಾನದ ಕೇಂದ್ರ ಬ್ಯಾಂಕ್ ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಹೊಂದಿರುವ ವಿದೇಶಿ ವಿನಿಮಯ ಮೀಸಲು ಕೇವಲ ಮೂರು ವಾರಗಳ ಆಮದುಗಳ ವೆಚ್ಚ ಪೂರೈಸಬಲ್ಲುದು ಎಂದು ಹಣಕಾಸು ತಜ್ಞರು ವಿಶ್ಲೇಷಿಸಿದ್ದಾರೆ. ನಗದು ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನ ಸರ್ಕಾರವು ಪ್ರಸ್ತುತ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮೂಲಕ ಹಣಕಾಸು ನೆರವನ್ನು ಪಡೆಯಲು ಹೆಣಗಾಡುತ್ತಿದೆ.

ಪಾಕಿಸ್ತಾನದ ರೂಪಾಯಿ ಮೌಲ್ಯ ಅಂತರಬ್ಯಾಂಕ್ ಮಾರುಕಟ್ಟೆಯಲ್ಲಿ ಪಾತಾಳಕ್ಕೆ ಕುಸಿದಿದ್ದು ಒಂದು ಅಮೆರಿಕನ್‌ ಡಾಲರಿಗೆ ಸುಮಾರು 270 ರೂಪಾಯಿಗಳಷ್ಟಾಗಿದೆ. ಇದರಿಂದಾಗಿ ತೀವ್ರ ಹಣದುಬ್ಬರ ಪಾಕಿಸ್ತಾನದಲ್ಲಿ ಉಂಟಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!