ರಷ್ಯಾದ ಕೊಸ್ಟ್ರೋಮಾ ನಗರದ ಕೆಫೆಯಲ್ಲಿ ಬೆಂಕಿ ಅವಘಡ: 15 ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ರಷ್ಯಾದ ಕೊಸ್ಟ್ರೋಮಾ ನಗರದ ಕೆಫೆಯೊಂದರಲ್ಲಿ ಶನಿವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ 15 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮಾಸ್ಕೋದ ಈಶಾನ್ಯಕ್ಕೆ 300 ಕಿಲೋಮೀಟರ್ (180 ಮೈಲುಗಳು) ದೂರದಲ್ಲಿರುವ ಕೊಸ್ಟ್ರೋಮಾ ನಗರದ ಕೆಫೆಯಲ್ಲಿ ಮುಂಜಾನೆ ಈ ಘಟನೆ ನಡೆದಿದೆ. ಅಪರಿಚಿತರು ಫ್ಲೇರ್ ಗನ್ ಬಳಸಿದ ವೇಳೆ ಇದ್ದಕ್ಕಿದ್ದಂತೆ ಬೆಂಕಿ ವ್ಯಾಪಿಸಿತು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲಿನ ಪೊಲಿಗೊನ್ ಎಂಬ ಕೆಫೆಯಲ್ಲಿ ಮುಂಜಾನೆ ಈ ದುರ್ಘಟನೆ ನಡೆದಿದೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಅಪಘಾತದಲ್ಲಿ ಐವರು ಗಾಯಗೊಂಡಿದ್ದು, ಸಣ್ಣ-ಪುಟ್ಟ ಗಾಯಗಳಾದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ.

ಬೆಂಕಿ ಹೊತ್ತಿಕೊಂಡಿದ್ದರಿಂದ ಕೆಫೆಯ ಮೇಲ್ಛಾವಣಿ ಕುಸಿದಿದೆ. ಘಟನೆ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಫ್ಲೇರ್ ಗನ್ ಬಳಸಿದ ವ್ಯಕ್ತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪೈರೋಟೆಕ್ನಿಕ್‌ಗಳು ರಷ್ಯಾದಲ್ಲಿ ಮನರಂಜನಾ ಸ್ಥಳದಲ್ಲಿ ಮಾರಣಾಂತಿಕ ಬೆಂಕಿಯನ್ನು ಉಂಟುಮಾಡುವುದು ಇದೇ ಮೊದಲಲ್ಲ. 2009 ರಲ್ಲಿ, ಪೆರ್ಮ್ ನಗರದ ಲೇಮ್ ಹಾರ್ಸ್ ನೈಟ್‌ಕ್ಲಬ್‌ನಲ್ಲಿ ಯಾರೋ ಪಟಾಕಿ ಸಿಡಿಸಿದ್ದರಿಂದ 150 ಕ್ಕೂ ಹೆಚ್ಚು ಜನರು ಬೆಂಕಿಯಲ್ಲಿ ಸಾವನ್ನಪ್ಪಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!